ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಶಿರೇಖಾ ವಿಜಯಪುರ

ಗಜಲ್

ಪ್ರೀತಿಯ ಬದುಕೀಗ ಸವಾಲಾಗಿದೆ
ಉಸಿರುಳಿಸುವ ಜೀವಜಲ ವಿಷವಾಗಿದೆ

ಜೀವನದ ಹಂತಗಳೆಲ್ಲ ಸಪಾಟಾಗಿವೆ
ಅಯ್ಯೋ ಆಗದೆನದೇ ಏರಲೇಬೇಕಿದೆ

ಹದ್ದು ಮೇಲಿದ್ದರೂ ದೃಷ್ಟಿ ಭೂಮಿ ಮೇಲೆ
ಆಯ್ದು ತಿನುವ ಕೋಳಿಯ ಜೀವಕೆ ಬೆಲೆಯೆಲ್ಲಿದೆ

ಎದೆಯೊಳಗೇ ಒಲವು ಸತ್ತು ಹೋಗಿತ್ತು
ಕೊಳೆತ ಹೃದಯ ವಾಸನೆ ಬೀರುತ್ತಿದೆ

ಈಗೀಗ ನರರು ರಕ್ತವನ್ನೇ ಕುಡಿಯುತ್ತಾರೆ
ಶಶಿ ಅಸುರರಿಗೆ ಪ್ರೀತಿಯನ್ನೇ ಹಂಚಬೇಕಿದೆ


ಶಶಿರೇಖಾ ವಿಜಯಪುರ

About The Author

1 thought on “ಶಶಿರೇಖಾ ವಿಜಯಪುರ ಗಜಲ್”

  1. ನನ್ನ ಗಜಲ್ ಅನ್ನು ಪ್ರಕಟಿಸಿದ ಸಂಪಾದಕರು ಹಾಗೂ ಉಪಸಂಪಾದಕರಿಗೆ ಧನ್ಯವಾದಗಳು. ಪತ್ರಿಕಾ ಬಳಗಕ್ಕೂ ಅನಂತ ನಮನಗಳು.

Leave a Reply

You cannot copy content of this page

Scroll to Top