ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥಕೆ

ಹಕ್ಕಿ ಹಾಡುತಿದೆ …..!!

ಜನರ ಜಂಜಡಗಳ ಕಂಡು
ಮುಗಿಲ ನೋಡುವ ರೈತರು
ಕೊರಗನು ಕಂಡು,
ಒಣಗಿದ ಪೈರನು ಕಂಡು
ಹಕ್ಕಿ ಹಾಡುತಿದೆ !!

ಜನರ ಸಮಸ್ಯೆಗಳ ಸರಮಾಲೆಯ
ನೋಡಿ
ರಾಜಕಾರಣೀಗಳ ಭರವಸೆಗಳ
ಮಾತಿನ ಮೋಡಿ
ಪ್ರಕೃತಿಯೇ ಮುನಿಸನು ಕಂಡು
ಹಕ್ಕಿ ಹಾಡುತಿದೆ !!

ದೇಶದ ಅನ್ನವನುಂಡು ದ್ರೋಹ
ಬಗೆಯುವ ಮಾರೀಚರ ಕಂಡು,
ಸಹಕರಿಸುವ ಮೀರ್ ಸಾಧಿಕ್ ರ
ನೋಡಿ
ನ್ಯಾಯಾದಾನದ ವಿಳಂಬವ ಕಂಡು
ಹಕ್ಕಿ ಹಾಡುತಿದೆ !!

ಸಂವಿಧಾನದ ಆಶಯಗಳ ಗಾಳಿಗೆ ತೂರಿ
ಪ್ರಜಾಪ್ರಭುತ್ವದ ಮೌಲ್ಯವ ಮಾರಿ
ಅಧಿಕಾರದ ಮೋಹದ ನಶೆಯೇರಿದವರ
ಕಂಡು
ಹಕ್ಕಿ ಹಾಡುತಿದೆ !!

ಆಧುನಿಕ ಸಮಾಜದಲ್ಲೂ ಧಮನೀತರ
ಬಡಿದು ತುಳಿದು ಸುಟ್ಟರೂ,
ಪ್ರತಿಭಟಿಸದ ಮಾನವೀಯತೆ ಇಲ್ಲದ ಜನರ
ಕಂಡು
ಬುದ್ದಿ ಜೀವಿಗಳ ಮೌನವ ಕಂಡು
ಹಕ್ಕಿ ಹಾಡುತಿದೆ !!

ಜನರ ಕಷ್ಟಗಳಿಗೆ ಧ್ವನಿಯಾಗದ ಮಾಧ್ಯಮಗಳ
ಕಂಡು
ಮೊಸಳೆ ಕಣ್ಣೀರು ಸುರಿಸುವ ನಾಯಕರ
ದಂಡನು ನೋಡಿ
ಭಾರತವೆಂಬ ಪುಣ್ಯ ಭೂಮಿಯು ಉಳಿಯುವುದೆಗೆಂದು
ಹಕ್ಕಿ ಹಾಡುತಿದೆ !!

——————————————–

ಕಾಡಜ್ಜಿ ಮಂಜುನಾಥ

About The Author

Leave a Reply

You cannot copy content of this page

Scroll to Top