ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕವಿತ.ಎಸ್

ಮಾನಿನಿ

ಮಾನಿನಿಯಲ್ಲಿಹುದು ಅದಮ್ಯ ಶಕ್ತಿ
ತನ್ನ ಇಡೀ ಜೀವವನ್ನು ತೇಯುವಳು ಕುಟುಂಬಕ್ಕಾಗಿ
ತನಗಾಗಿ ಬದುಕದೆ ತನ್ನವರಿಗಾಗಿ ಬದುಕುವಳಾಕೆ
ತ್ಯಾಗದ ಮೂರ್ತಿಯಾಗಿ ಕಂಗೊಳಿಸುವಳಾಕೆ,
ಜಗವು ನೋಡುತ್ತಿಹುದಿಂದು ಆಕೆಯನ್ನು ನಿಕೃಷ್ಟವಾಗಿ
ಶತಶತಮಾನಗಳಿಂದಲೂ ಆಕೆಯನ್ನು ಗೌರವಾಧರಗಳಿಂದ ಕಂಡ ನಮ್ಮ ಸಂಸ್ಕೃತಿ

ಹೇಳಹೆಸರಿಲ್ಲದಂತೆ ಹಳಸುತಿದೆ
ಏನನ್ನು ಸಹಿಸಬಲ್ಲವಳಾಕೆ ತನ್ನವರಿಗಾಗಿ
ಆದರೆ ತನ್ನತನ ಕಳೆದುಕೊಳ್ಳಳು
ಚುಚ್ಚುವರು ಆಕೆಯನ್ನು ಸಮಾಜದಲ್ಲಿ ಎಂತಿದ್ದರೂ
ಕೆಚ್ಚೆದೆಯ ಆಕೆ ಕಲ್ಲಾಗಿಸುಳು ಹೃದಯವ ತನ್ನಗರಿವಿಲ್ಲದೆಯೇ,
ಅತ್ಯಾಚಾರ ಹಿಂಸಾಚಾರದಲಿ
ನಲುಗುತಿದೆ ಮಾನಿನಿಯ ಮನವು
ಧ್ವನಿ ಎತ್ತಲಾಗದೆ ಬಿಗಿದಿದೆ ಗಂಟಲೊಳಗೆ
ಇನ್ನಾದರೂ ಪ್ರತಿಭಟಿಸಬೇಕೆಂದು
ಅನ್ಯಾಯದ ಮಜಲುಗಳು ಹೋರಾಟದ ಅನಿವಾರ್ಯತೆಯ ಸಾರುತಿದೆ
ಸಹನೆಯ ಕಟ್ಟೆ ಒಡೆದು ದ್ವೇಷ ರೋಷಗಳು ಕುದಿದಿದೆ
ಶೋಷಣೆಯ ಸ್ವರೂಪಗಳಿಂದ
ಘಟನಾವಳಿಗಳು ಸಾರುತಿದೆ
ಮಾನವೀಯತೆ ಮರೆತ ಜಗವನ್ನು
ನಿಲ್ಲದಿರು ಮಾನಿನಿ ಹೋರಾಡು ಪ್ರತಿಕ್ಷಣವೂ ನ್ಯಾಯಕ್ಕಾಗಿ ಎಚ್ಚರ!!!


ಕವಿತ.ಎಸ್

About The Author

Leave a Reply

You cannot copy content of this page

Scroll to Top