ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ನಾಗರಾಜ ಬಿ.ನಾಯ್ಕ

‘ಕಾದು ಕುಳಿತವರು’

ಹಳ್ಳಿ ಊರ ದಾರಿ ನಡುವೆ
ಕಾದು ಕುಳಿತವರು
ಮಾತ ನಡುವೆ ಕಥೆಯ ಹರಡಿ
ನೋವ ಮರೆತವರು…..

ಎಲ್ಲೋ ಏನೋ ಕೆಲಸ ಮಾಡಿ
ಹೊಟ್ಟೆ ಬಟ್ಟೆ ನೆಪವ ಮಾಡಿ
ದಾರಿ ಹಿಡಿದವರು ಅವರು
ಎಲ್ಲೋ ಹೊರಟವರು……

ಅಣ್ಣನಲ್ಲ ತಮ್ಮನಲ್ಲ ಮಾತಿಗೆ
ಆದರೂ ಆಡುವರು ಮಾತು ಪ್ರೀತಿಗೆ
ಅಕ್ಕನಲ್ಲ ತಂಗಿಯಲ್ಲ ಅಕ್ಕರೆಗೆ
ಆದರೂ ನೀಡುವರು ಹೊಟ್ಟೆ ಹಸಿವೆಗೆ……

ಸಿರಿಯಿಲ್ಲ ಸಂಪದವಿಲ್ಲ ಅವರ ಬದುಕಿಗೆ
ಕುಡಿವ ನೀರು ಬೀಸೋ ಗಾಳಿ
ಸಾಕು ಅವರ ಉಸಿರಿಗೆ
ನಾಳೆ ಬಾಳೋ ಕಸುವಿಗೆ……

ಸೂರ್ಯ ಚಂದ್ರ ಚುಕ್ಕಿಗಳು
ಬಾನ ತುಂಬಾ ನಕ್ಕಿರಲು
ಮಣ್ಣ ನೆಲವು ಜೀವ ಜಲವು
ಅವರ ಸ್ವರ್ಗ ಸದೃಶವು……

ಹಸಿವೆಗನ್ನ ಹೊಟ್ಟೆ ತುಂಬಿ
ಉಸಿರ ತುಂಬಾ ಗಾಳಿ ನಂಬಿ
ಜಗವು ನಡೆಯಲು
ಜೀವ ಸಂತಸದಿ ಸಾಗಲು…….


ನಾಗರಾಜ ಬಿ.ನಾಯ್ಕ

About The Author

1 thought on “ನಾಗರಾಜ ಬಿ.ನಾಯ್ಕರವರ ಕವಿತೆ ‘ಕಾದು ಕುಳಿತವರು’”

  1. Super…. ನಿಮ್ಮೊಳಗೆ ಇಷ್ಟು ಒಳ್ಳೇ ಕವಿ ಇದ್ರೂ ಇಷ್ಟು ದಿನ ಎಲೆ ಮರೆಯ ಕಾಯಿಯಂತೆ ಯಾಕಿದ್ರಿ

Leave a Reply

You cannot copy content of this page

Scroll to Top