ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅರಿವಾಗಲಿಲ್ಲ

ಸುಧಾ ಪಾಟೀಲ

ಪ್ರೀತಿ ಅನುರಾಗವಾಗಿ
ಭಾವ ಬಂಧನದಲಿ
ಬೆಸೆದು ಮೊಳಕೆಯೊಡೆದು ಚಿಗುರುಬಿಟ್ಟು ಚೆಲ್ವರಿದು
ಹೂವಾಗಿದ್ದು ಅರಿವಾಗಲಿಲ್ಲ

ಸಂತೃಪ್ತಿಯಲಿ ಬೆಸಗೊಂಡು
ಆನಂದದ ಮಿಲನದಿ ಕೂಡಿ
ಕಳೆಯುವ ಈ ಲೆಕ್ಕದಿ
ಪ್ರೇಮವು ಅರಳಿ ನಿಂತದ್ದು
ಅರಿವಾಗಲಿಲ್ಲ

ಈ ಜೀವನ ಘಟ್ಟದಿ
ಸಿಕ್ಕ ಗೆಳೆತನದ ಹರವು
ಇಷ್ಟು ಅಗಾಧವಾಗಿ
ಹೆಮ್ಮರವಾಗಿ ಬೆಳೆದದ್ದು
ಅರಿವಾಗಲಿಲ್ಲ

ಸಮಾನ ಭಾವನೆಯ
ವೈಚಾರಿಕತೆಯ ನಿಲುವಿನ
ಯಾರ ಊಹೆಗೂ
ನಿಲುಕದ ಪವಿತ್ರ ಸಂಬಂಧ
ಗಾಢವಾಗಿ ಆವರಿಸಿದ್ದು
ಅರಿವಾಗಲಿಲ್ಲ

ಬೇಡವೆಂದರೂ ಬಿಡದ
ಯಾರ ಅಪ್ಪಣೆಗೂ ಕಾಯದ
ಹೊರಳು ದಾರಿಯ ಪಯಣ
ಜೀವನದುಸಿರು ಆಗಿದ್ದು
ಅರಿವಾಗಲಿಲ್ಲ

ಏನೂ ಅಪೇಕ್ಷಿಸದ
ಕೊಡುಕೊಳ್ಳುವಿಕೆಯಿಲ್ಲದ
ಹಸನಾದ ಬೆಚ್ಚನೆಯ
ಈ ಸ್ನೇಹ ಹೃದಯದ
ಬಡಿತವೇ ಆಗಿದ್ದುಅರಿವಾಗಲಿಲ್ಲ


ಸುಧಾ ಪಾಟೀಲ

About The Author

12 thoughts on “ಸುಧಾ ಪಾಟೀಲ ಕವಿತೆ-ಅರಿವಾಗಲಿಲ್ಲ”

  1. ನಿಮ್ಮ ಸುಂದರ ಕವನ ಕಾವ್ಯ ನಿತ್ಯ ನೂತನ ಸ್ಫೂರ್ತಿ

    1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

      ಭಾವ ಸ್ಪುರಣೆಯ ಕವಿತೆ ಸುಧಾ ಅವರೇ ಚೆನ್ನಾಗಿ ಬರೆಯುತ್ತಿರಿ

  2. Dr Danamma Zalaki

    ಇನ್ನೂ ಎತ್ತರಕ್ಕೆ ಬೆಳೆಯುವ ಲಕ್ಷಣಗಳು ಕಾಣುತ್ತಿವೆ ನಿಮ್ಮಲ್ಲಿ ನಿಮ್ಮ ಕವನದಲ್ಲಿ

  3. Geeta Bagalkot

    ಅತ್ಯಂತ ರೊಮ್ಯಾಂಟಿಕ್ ಕಾವ್ಯ ಕುಸುಮ ನಿಮ್ಮ ಪ್ರತಿಭೆಗೆ ಒಂದು ಸಲಾಂ

  4. ನನ್ನ ಕವನವನ್ನು ಮೆಚ್ಚಿದ ಎಲ್ಲ ಕವಿಮನಸುಗಳಿಗೆ ಹೃದಯದಾಳದ ಧನ್ಯವಾದಗಳು

Leave a Reply

You cannot copy content of this page

Scroll to Top