ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಾವಿತ್ರಮ್ಮ ಓಂ

ಹನಿ

ನಿನ್ನ ಮಾತೆಷ್ಟು ಚಂದವೊ
ಮೌನವು ಅಷ್ಟೇ ಅಂದ//

ನಿನ್ನ ಇರುವೆಷ್ಟು ಸಂತಸವೊ
ನಿರೀಕ್ಷೆಯು ಅಷ್ಟೇ ಸಮಾಧಾನ//

ನಿನ್ನ ಕೋಪವೆಷ್ಟು ಭಯವೋ
ಶಾಂತತೆಯೂ ಅಷ್ಟೇ ಸಂತಸ//
” ಆದರೆ”
ನಿನ್ನ ಒಲವೆಷ್ಟು ಮಧುರವೊ

ಬೇಸರವು ಅಷ್ಟೇ ಕ್ಲೇಶಮಯ//

ನಿನ್ನ ಹೊಗಳಿಕೆ ಎಷ್ಟು ಖುಷಿಯೋ
ತೆಗಳಿಕೆಯು ಅಷ್ಟೇ ಮ್ಲಾನಮಯ//

ನಿನ್ನ ಹೊಸರುಚಿ ಸವಿಯೆಷ್ಟು ಆಪ್ಯಾಯವೋ
ನಿನ್ನ ಹಸಿವಿನ ಕೋಪ ಅಷ್ಟೇ ಅಸಹನೀಯ//


About The Author

Leave a Reply

You cannot copy content of this page

Scroll to Top