ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕಾಗುಣಿತ

ಜೀವನವು ಕನಸು
ನೋಡಿ ಬಿಡು
ಮುಂಜಾವಿನ ಮಂಪರು
ಎಲ್ಲವೂ ಮಸುಕು ಮಸುಕು

ಬಾಳೆಂಬುದು ಪಯಣ
ಮುಗಿಸಿ ಬಿಡು
ಮೆರವಣಿಗೆ ಮಸಣಕ್ಕೆ
ಕೊನೆಯ ದಾರಿ

ಬದುಕೆಂಬುದು ನಾಟಕ
ಆಡಿ ಬಿಡು
ಬಣ್ಣ ಬಣ್ಣದ ಪಾತ್ರ
ನೆಲದ ರಂಗ ಮೇಲೆ

ಸಂಸಾರ ಆಟದಲಿ
ನೀನೊಮ್ಮೆ ಆಡಿ ಬಿಡು
ಸೋಲು ಗೆಲುವಿನ
ಚಿಂತೆ ಮರೆತು

ಬದುಕೆಂಬುದು ಪರೀಕ್ಷೆ
ಎದುರಿಸು ನಗೆ ಹೊತ್ತು
ಜಯ ಅಪಜಯಗಳ
ಲೆಕ್ಕ ಮರೆತು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

11 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಕಾಗುಣಿತ”

  1. ಡಾ ಶರಣಮ್ಮ ಗೋರೆಬಾಳ

    ವಾಸ್ತವಿಕ ಸತ್ಯ ಸರ್. ಬದುಕನ್ನು ಬಂದಂತೆ ಅನುಭವಿಸಿ ಮುಗಿಸಬೇಕು.

  2. Dr Veerakshi Viveki Badami

    ಬದುಕಿನ ನೈಜ ಚಿತ್ರಣವನ್ನು ಸ್ವಾರಸ್ಯವಾಗಿ ಅಭಿವ್ಯಕ್ತಿಸಿದ್ದೀರಿ….

  3. Sudha Patil Belagavi

    ಭಾವಪೂರ್ಣ ಕವಿತೆ
    ಬದುಕಿನ ಪ್ರವಾಸ ಯಾನದ ಸುಂದರ
    ಅಭಿವ್ಯಕ್ತಿ

  4. Indira motebennur

    ಬದುಕಿನ. ನಗ್ನ ಸತ್ಯ ಕೆ ಹಿಡಿದ ಕೈ ಗನ್ನ ಡಿ …. ಬಾಳ ಯಾನದ ಸಿಹಿ ಕಹಿಕಹಿಯ ಪಯಣದ ನವಿರಾದ
    ರು ನೆೀ ವರಿಕೆ..

  5. Anasuya Siddharama

    ಬೆರಳ ಸಂದುಗಳಲಿ ಸೋರಿಹೋಗುವ ಮುನ್ನ, ಹಿಡಿಯಷ್ಟು ಬದುಕನ್ನು ಸಾರ್ಥಕಗೊಳಿಸೆಂಬ ಬಾಳ್ದೀವಿಗೆ ಸರ್

Leave a Reply

You cannot copy content of this page

Scroll to Top