ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಡೋ.ನಾ.ವೆಂಕಟೇಶ

ಹಂಗಿಲ್ಲದ ಕನಸು

ನಿದ್ದೆಯಿಂದ ಎದ್ದಾಗ ನಿದ್ದೆ
ಮಾಡಿರಲೇ ಇಲ್ಲ
ಕಳೆದ ಮೈಲಿಕಲ್ಲುಗಳನ್ನ ತುಳಿದ ಹಾದಿಬೀದಿಗಳನ್ನ
ಹಾದು ಬರಲೇ ಇಲ್ಲ!

ನಿದ್ದೆಯಿಂದೆದ್ದಾಗ ಯಾಕೋ
ಹಾಳಾದ್ದು ಗಾಯ
ವ್ರಣವಾಗಿ
ನಿರಂತರ ಮಾಯಾಜಾಲ!

ಉಸಿರಾಡಿದ ನೆನಪು
ಕಿತ್ತರೆ ಕೈಯಲ್ಲೆ ಹೃದಯ
ಬಿಸಿಯಾದ ಶ್ವಾಸ!

ಹಾಗೇ-
ಮತ್ತೆ ನಿದ್ದೆಯಿಂದೆದ್ದಾಗ
ನಾನಿರಲಿಲ್ಲ
ಬರೆ ನೀನೇ!
ಕನಸಿನ ಕೂಗಿಲ್ಲ
ಹಾಗೂ
ನಿನ್ನ ಹಂಗೂ ಇಲ್ಲ


ಡಾ ಡೋ.ನಾ.ವೆಂಕಟೇಶ

About The Author

8 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ಹಂಗಿಲ್ಲದ ಕನಸು”

  1. ನಿಮ್ಮ ಇನ್ನೊಂದು ಸುಂದರವಾದ ಕವನವನ್ನು ಗಮನಿಸಲು ತುಂಬಾ ಸಂತೋಷವಾಗಿದೆ ಮತ್ತು ನಾನು ಹಗಲು ಕನಸು ಕಾಣುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ತುಂಬಾ ಚೆನ್ನಾಗಿದೆ.ಶುಭಾಶಯಗಳು

    1. D N Venkatesha Rao

      ಥ್ಯಾಂಕ್ಸ್!ನೀವು ಓದಿದ ಕವನ ನೀವು ಓದಿದ್ದೇ ಅಲ್ಲ!
      Manjunath Thanq very much

  2. Dr K B SuryaKumar

    ಕನಸು ನನಸಿನ ಚಕ್ರವ್ಯೂಹದ ನಡುವೆ ಕಾಣುವುದೆಲ್ಲವು ಮಾಯಾಜಾಲ.
    ಮಾಯೇ ತೊರೆದೊಡೆ ಯಾರದೇ ಹಂಗಿಲ್ಲ ಕಾಣು..
    ವೆಂಕಣ್ಣ ಚೆನ್ನಾಗಿದೆ.

  3. D N Venkatesha Rao

    ಬದುಕಿದ್ದು ಕನಸೋ, ಬಾಳಿದ್ದು ನನಸೋ
    ಅಥವಾ ಇದೆಲ್ಲ ಮಾಯಾಜಾಲವೋ!
    ಅದಿರಲಿ,ನಮ್ಮ ಮೊದಲೇ ಹಾಡಿದ್ದಾರೆ
    “ಜಗವೇ ನಾಟಕ ರಂಗ”
    Thanks Surya!

    1. D N Venkatesha Rao

      Nevertheless .These poems are intended to really think it over and over. Once you can appreciate it , then you will understand it
      Thank you Roopa latha!

    2. D N Venkatesha Rao

      Just think it over.Its our old ‘ಜಗವೆ ನಾಟಕ ರಂಗ’
      ಧನ್ಯವಾದಗಳು!

Leave a Reply

You cannot copy content of this page

Scroll to Top