ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ರೇಖಾ ಸುದೇಶ್ ರಾವ್

ಬಿರುಕು

ಕಾರಂಜಿಯಂತೆ ಪುಟಿದೆದ್ದ ನಮ್ಮೊಳಗಿನ ಒಡಕು
ಗೊಂದಲದ ಮನಗಳಿಂದ ಸೃಷ್ಟಿಯಾದ ಬಿರುಕು
ಹೊಗಳಿಕೆ,ಪ್ರಶಂಸೆ ದಾಹ ದೂರ ಸರಿಸಬೇಕು
ಒಗ್ಗಟಲಿ ಬಲವೆಂದು ಮನದಿ ಧ್ಯೇಯವಿರಬೇಕು

ಮುಖ ಸ್ತುತಿಗೆ ನಡೆ ನುಡಿ ನಟನೆ ಭಾವ
ನಿಸ್ವಾರ್ಥ ಸೇವೆ ನೈಜ ಪ್ರೀತಿ ಮಾನವೀಯತೆ ಅಭಾವ
ಸತ್ಯಾಂಶ ಅರಿಯದೆ ಪರ ದೂಷಣೆ ಮನೋಭಾವ
ಮುಗ್ಧ ಮನಗಳ ಕಟು ನುಡಿಗಳಲಿ ಕೊಳ್ಳುವ ಸ್ವಭಾವ

ಮಾತಿಗೆ ಮಾತಿನ ಪ್ರಹಾರ ಅರಿಯದವರಾರು
ಮೌನವಾಗಿಹರಿಲ್ಲಿ ಕಾರಣ ನಮ್ಮವರಿವರು
ಆಂತರಿಕ ದ್ವೇಷ ಹೊತ್ತಿ ಹೊಗೆಯಾಡುತ್ತಿದೆ
ಬಾಹ್ಯದಲಿ ಶಾಂತ ಚಿತ್ತ ಚೆಲ್ಲಾಟವಾಡುತಿದೆ

ಟೀಕೆ ನಿಂದನೆ ಅಪಪ್ರಚಾರಕ್ಕೆ ಹಾಕು ಕಡಿವಾಣ
ಚೆಲ್ಲಾಟವಾಡುತಿಹುದಿಲ್ಲಿ ಅಧಿಕಾರ ಕುರುಡು ಕಾಂಚಾಣ
ಅಹಂ ಸ್ವಾರ್ಥ ಸರಿಸಿ ಹೆಜ್ಜೆ ಇಡೋಣ
ಹೆಜ್ಜೇನಾಗಿ ಪರರ ಕಡಿಯೋದು ಬಿಡೋಣ
ಸಂಘಟನಾ ಶಕ್ತಿ ಇನ್ನಷ್ಟು ಬಲ ಪಡಿಸೋಣ


ರೇಖಾ ಸುದೇಶ್ ರಾವ್


About The Author

Leave a Reply

You cannot copy content of this page

Scroll to Top