ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಂಭ್ರಮ ಶನಿವಾರ

ಭಾಗ್ಯ.ಎಂ.ವಿ.

ಪುಸ್ತಕ ಚೀಲದ ಹೊರೆಯನು ತಪ್ಪಿಸಿ
ಸಂಭ್ರಮ ತಂದಿತು ಶನಿವಾರ/
ಚುಮುಚುಮು ಚಳಿಯಲಿ ಚಿಲಿಪಿಲಿಗುಟ್ಟುತ
ಮಕ್ಕಳು ಕುಣಿಯುತ ಬಂದಾರ//೧//

ತಮ್ಮಯ ಕನಸಿನ ಊರಿನ ಕಲ್ಪನೆ
ಮೊಗ್ಗಿನ ಮನಸಿನ ಚಿತ್ತಾರ/
ಗ್ರಾಮದ ಏಳಿಗೆ ದೇಶದ ಏಳಿಗೆ
ಮೊಳಗಲಿ ಪ್ರತಿಜ್ಞೆ ಝೇಂಕಾರ//೨//

ಶಾಲೆ ,ರಸ್ತೆ ,ಬೀದಿಯದೀಪ
ಗ್ರಂಥಾಲಯ, ಬಸ್ ನಿಲ್ದಾಣ/
ಶುದ್ಧ ಕುಡಿಯುವ ನೀರಿನ ಘಟಕ
ಎಲ್ಲರಗತ್ಯವ ತಿಳಿದಾರ//೩//

ಗ್ರಾಮಪಂಚಾಯ್ತಿ, ಅಂಗನವಾಡಿ
ಆರೋಗ್ಯ ಕೇಂದ್ರಕೆ ನಡೆದಾರ/
ವಿರೂಪಗೊಳಿಸದೆ ಕಟ್ಟಡಗಳನು
ರಕ್ಷಿಸಲು ಪಣ ತೊಡುತಾರ//೪//

ಚರ್ಚೆ, ಚಿತ್ರ ಪ್ರಬಂಧ ಮಂಡಿಸಿ
ಕಲಿವುದು ಸ್ನೇಹದ ಪರಿವಾರ/
ಗುಂಪಿನ ಎಲ್ಲರ ಭಾವನೆ ಅರಿಯುತ
ಬಾಲ್ಯವು ಪಡೆವುದು ಸಂಸ್ಕಾರ//೫//

ನಾಳೆಯ ನಾಡಿನ ಪ್ರಜೆಗಳು ತಮ್ಮ
ಹಕ್ಕು ಕರ್ತವ್ಯ ಅರಿತಾರ/
ಸ್ವಚ್ಛ ಗ್ರಾಮಕೆ ಮುನ್ನುಡಿ ಬರೆಯುತ
ಕಲಿವರು ನೀಡಲು ಸಹಕಾರ//೬//

ಅರಳುವ ಪ್ರತಿಭೆಯ ಗುರುತಿಸಿ ಬೆಳೆಸಿ
ಜಾಣರ ರಮಿಸಿತು ಶುಭವಾರ/
ಜ್ಞಾನದ ಹೂರಣ ಸವಿಯನು ಹಂಚುತ
ಸಂಭ್ರಮ ತಂದಿತು ಶನಿವಾರ//೭//


ಭಾಗ್ಯ.ಎಂ.ವಿ.


About The Author

1 thought on “ಭಾಗ್ಯ.ಎಂ.ವಿ.ಕವಿತೆ-ಸಂಭ್ರಮ ಶನಿವಾರ”

Leave a Reply

You cannot copy content of this page

Scroll to Top