ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ. ಮಾಸ್ತಿ ಬಾಬು

ಸಂತಸದ ಕ್ಷಣಗಳು

ಹೊತ್ತು ಮುಳುಗುವ ಸಮಯ
ಆಗಸದಲಿ ಮೂಡಿದೆ ಮೋಡಗಳು
ಧರೆಯ ಮೇಲೆದ್ದಿದೆ ಸುಂಟರಗಾಳಿಯು
ಭಯವು ಬೆನ್ನಟ್ಟಲು ಓಡುತಿಹವು ಜಾನುವಾರುಗಳು

ರಭಸದಿ ಗಾಳಿಯು ಬೀಸುತಲಿರಲು
ಚದುರಿತು ಮೋಡಗಳು
ಮಳೆ ಹನಿ ಧರೆಗುರುಳಲು
ಸಂತಸ ಪಟ್ಟಳು ಭೂರಮೆಯು

ಹಳ್ಳ-ಕೊಳ್ಳ ತುಂಬುತಲಿರಲು
ಮರ-ಗಿಡ ನಕ್ಕವು ಸಂಭ್ರಮದಿ
ರೈತನ ಮೊಗದಲಿ ಹರ್ಷವು ತುಂಬಲು
ಸಂತಸ ಹಿಗ್ಗಿ ಕುಣಿದಿತ್ತು

ಕಾಯಕ ಜೀವಿಯು ದುಡಿಯುತಲಿರಲು
ನಮ್ಮಯ ಹೆಮ್ಮೆಯ ನಲ್ಮೆಯ ತಾಯಿ
ಕನ್ನಡ ಮಾತೆಯು ಹರಸಿದಳು
ನಮ್ಮಯ ಹಸಿವನು ನೀಗಲು
ಇದುವೆ ವರವಾಯ್ತು.


ಡಾ. ಮಾಸ್ತಿ ಬಾಬು

About The Author

4 thoughts on “ಡಾ. ಮಾಸ್ತಿ ಬಾಬು-ಸಂತಸದ ಕ್ಷಣಗಳು”

Leave a Reply

You cannot copy content of this page

Scroll to Top