ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕವಿತೆ ಧಾರಾವಾಹಿ

ಡಾ.ಡೋ.ನಾ.ವೆಂಕಟೇಶ

ಕವಿತೆ ಧ್ವನಿಸ ಬೇಕು
ಹೊಸ ರಾಗ ರಂಜಿಸಿದಾಗ
ಕವಿತೆ ಉಲಿಯ ಬೇಕು
ಹಳೆ ರಾಗ ಮೆರೆದಾಗ

ಮತ್ತು ಆಗಾಗ
ಪೊರೆಯ ಬೇಕು
ತಲೆಚಪ್ಪಡಿಯ ಹುಳ
ಹೆಡೆ ಎತ್ತಿದಾಗ!

ಹಳೆ ಕಾಲದ ‘ಕಾದಲ್ ‘
ನಿಜ ಕಾಲದಲ್ಲಿ ‘ಪಾಗಲ್ ‘
ಇವೆಲ್ಲ
ಚರ್ವಿತ ಚರ್ವಣ

ಬದುಕಿನ ಕಾವ್ಯಕ್ಕೆ ನಮಿಸು
ಈ ಸೊಗಸಿಗೆ ನಮಿಸು ಈ
ಸೊಗಡಿಗೆ ಸಂತೈಸು!

ಇರುವಷ್ಟು ದಿನ ಇದ್ದುಬಿಡು
ನಿರ್ಭಿಡೆಯಿಂದ
ನಿರ್ಮೋಹದಿಂದ
ನಿರ್ಮಮಕಾರದಿಂದ!

ಅಪ್ಪ ಮುತ್ತಜ್ಜ
ಮಗ ಮರಿಮೊಮ್ಮಗ
ಬರೀ
ಕಥೆಯಷ್ಟೇ ಅಲ್ಲ
ಧಾರಾವಾಹಿ!

ವರ್ಡ್ಸ್ವರ್ಥರ ಕವಿತೆ
ಡ್ಯಾಫೊಡಿಲ್ಸ್ ಗಳಂತೆ
ಅರಳಿದಾಗಷ್ಟೆ ಹೂವು ,
ಕಾವು !
ಬೇರೆ ಬೇರೆ ಕಾಲಕ್ಕೆ
ಬೇರೆ ಬೇರೆ ಸಂಚಿಕೆ!

ಕವನೋದ್ಭವ ಅಲ್ಲ-
ಜೀವನಾನುಭವ
ಅದ್ಭುತ
ಅನಂತ
ಅಗಮ್ಯ


ಡಾ.ಡೋ.ನಾ.ವೆಂಕಟೇಶ

About The Author

8 thoughts on “ಡಾ.ಡೋ.ನಾ.ವೆಂಕಟೇಶ-ಕವಿತೆ ಧಾರಾವಾಹಿ”

  1. Dr K B SuryaKumar

    ಕವಿತೆ ಬರೆಯ ಬೇಕು,
    ಮನಸಿಗೆ ಮುದವಾದಾಗ.
    ಹಳೆಯದೆಲ್ಲ ದೂಳು ಕೊಡವಿ
    ಮೇಲೆತ್ತಿ ನೋಡ ಬೇಕು.
    ಹಳೆ ಬೇರು, ಹೊಸ ಚಿಗುರು
    ಇದೇ ಜೀವನದ ಬರಹ..

    1. D N Venkatesha Rao

      ಸೂರ್ಯನ ಪ್ರಶಂಸೆ ಸೂರ್ಯ ಉದಯಿಸುವಷ್ಟೆ ಸತ್ಯ!
      Thanq Surya.

Leave a Reply

You cannot copy content of this page

Scroll to Top