ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅನಿತಾ ಮಾಲಗತ್ತಿ ಕವಿತೆ-ಕಟ್ಟೆ ಪುರಾಣ

ಕಾವ್ಯ ಸಂಗಾತಿ ಅನಿತಾ ಮಾಲಗತ್ತಿ ಕಟ್ಟೆ ಪುರಾಣ ಎಷ್ಟು ಚೆಂದವಿತ್ತು ಆ ಕಾಲಇಡೀ ದಿನ ಶ್ರಮ ಮರೆತುಕಳೆಯುತ್ತಿದ್ದೆವು ಕಟ್ಟಿಯ ಮೇಲೆಮಿತಿಯಿರದೇ ವಯಸ್ಸಿಗೆ : ಗಡಿಯಾರಕೂಹರಟವುದೊಂದೇ ಗೊತ್ತು ಕಟ್ಟೆ ಪುರಾಣಕೆ! ಅತ್ತೆ ಸೊಸೆಯ ಆಡಿಕೊಂಡರೆಸೊಸೆಯ ಬಾಯಲ್ಲಿ ಅತ್ತೆಯ ಗುಣಗಾನಅತ್ತೆ – ಸೊಸೆಯರ ಜಟಾಪಟಿಯ ಚಿತ್ರಜಯಕ್ಕನ ಬೊಂಬಾಯಿ ಬಾಯಲ್ಲಿ! ಮದುವೆಯಾಗದೇ ಉಳಿದ ಮಗಳ ಸುದ್ಧಿಮದುವೆ ಆಗಿ ಮಕ್ಕಳಿಲ್ಲದವರ ವ್ಯಥೆಮದುವೆ ಬೇಡವೆಂದುಳಿದವರ ಅಳಲುಮದುವೆಗೆ ಸೀರೆ ಕುಪ್ಪಸದ ಚಿಂತೆಗಳು! ಸವತೆ ಬೀಜದ ಹಿಟ್ಟಿನಂತೆ ಕರಗುವಸಾವಂತ್ರಮ್ಮನ ಚಂಚಿಯೊಳಗಿನ ಕಥೆಗಳುಚವಳೇಯೊಳಗಿನ ನರ್ಸ ತೆಗೆದಂತೆಮಾದಮ್ಮನ ನೀತಿ ಮಾತುಗಳು! ಬಂಜೆ ಬಂಗಾರಮ್ಮನ ಹೊಗಳಿಕೆಸಂಜೆ ಕುಡಿದು ಬರುವವರ ತೆಗಳಿಕೆಗಂಜಿ ಕುಡಿದು ಬದುಕಿದವರ ಕಥೆಎಂಜಲು ತಿನ್ನುವ ಭಂಡರ ಬಾಳ್ವೆಗಾಥೆ ಬಿಡಿಸಿಟ್ಟ ಸೊಪ್ಪಿನಂತೆ ನಿಚ್ಚಳಹೆಣ್ಮಕ್ಕಳ ಸಮಸ್ಯೆಗೆ ಪರಿಹಾರಸಂತೆ ಮಾಲುಗಳ ದರಗಳ ಚರ್ಚೆಗುಟ್ಟುಗಳ ಗಟ್ಟಿಮೇಳ ಗಂಗಿಬಾಯಿಂದ ಆಯಾ ವಾರಗಳಲಿ ಸತ್ತವರ ಸುತ್ತಬಿಚ್ಚುವ ಪಾಪ – ಪುಣ್ಯಗಳ ಸುರುಳಿಗಳುಸಾಯದೆ ಉಳಿದವರ ಸುತ್ತಲೂಹಿಡಿ ಶಾಪದ ಸರಮಾಲೆಗಳು!! ಸೆಖೆಎಂಬುದು ನೆಪ ಮಾತ್ರಕೆಮಿಕ್ಕಿಯೇ ಬಿಡುತ್ತಿತ್ತು ನಿತ್ಯದ ಪುರಾಣಬದಲಾದರೇನು ಮಳೆ ಚಳಿ ಬಿಸಿಲು ಕಾಲಗಳುಬರವಿರದೇ ಬೀಸಿ ಬರುವ ಬಿಸಿ ಸುದ್ದಿಗಳು! ಕಳೆದುಕೊಂಡೆವೇ ಕಟ್ಟಿಯ ಮನೆಗಳ!ಬಾಳ ಹೊರಟು ಸ್ವಾರ್ಥದ ಬದುಕಮರೆಯಾಗಿ ಹೋದವೇ ಕಟ್ಟೆಗಳು?ಹುದುಗಿ ಹೋದವೇ ಗಾರೆಗಳ ಮಧ್ಯೆಕಟ್ಟೆ ಪುರಾಣಗಳು!!——————————– ಅನಿತಾ ಮಾಲಗತ್ತಿ

ಅನಿತಾ ಮಾಲಗತ್ತಿ ಕವಿತೆ-ಕಟ್ಟೆ ಪುರಾಣ Read Post »

You cannot copy content of this page

Scroll to Top