ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಲಿವ ಮನಸ್ಸು

ಸುಧಾ ಪಾಟೀಲ

ಮನದ ತುಂಬಾ
ನಗೆ ಮಲ್ಲಿಗೆಯ
ಹೊತ್ತು ಹೃದಯದ
ತುಂಬಾ ನವಿರುಗಾಳಿಯ
ಬೀಸಿ ನಲಿವ ಮನಸ್ಸು
ರಂಗೇರಿದೆ

ಸಂಕೋಚದಿ ಹಿಡಿದಿಟ್ಟ
ಭಾವನೆಗಳ ಧುಮುಕಲು
ಬಿಟ್ಟು ಜಲಪಾತದಂತೆ
ಹೆಪ್ಪಿಟ್ಟ ಕನಸುಗಳ
ಅರಳಲು ಬಿಟ್ಟು
ನಲಿವ ಮನಸ್ಸು
ಉಕ್ಕೇರಿದೆ

ಅನವರತ ನಿನ್ನದೇ
ಧ್ಯಾನದಲಿ ತಂಗಿ
ವಾಸ್ತವದ ಹಂಗಿಲ್ಲದೆ
ಆಗುಹೋಗುಗಳ
ಪರಿವೆಯಿಲ್ಲದೆ
ನಲಿವ ಮನಸ್ಸು
ಚಿಮ್ಮತಲಿದೆ

ಹೊಸ ಹೊಸ ಭಾವನೆಗಳ
ಹೊತ್ತು ತಂದೆ ಆಗಾಗ
ಅದ ಕಂಡು
ಆಗಸದಿ ಹಾರಾಡುವ
ಹಕ್ಕಿಯಾಗಿ ರೆಕ್ಕೆ ಬಿಚ್ಚಿ
ನಲಿವ ಮನಸ್ಸು
ಗಗನಕ್ಕೇರಿದೆ

ಎಲ್ಲದರಲ್ಲೂ ನಿನ್ನನ್ನೇ
ಕಾಣುತ ಘಳಿಗೆಗೊಮ್ಮೆ
ಮಗ್ಗಲು ಬದಲಿಸುತ
ತವಕದ ಪರಮಾವಧಿಯ
ಮೀರಿ ನಲಿವ ಮನಸ್ಸು
ಮಿಂಚುಬಳ್ಳಿಯಾಗಿದೆ

ಗೆಳೆತನದ ಪರಿಧಿಯಲಿ
ವಿಶ್ವಾಸವಿಟ್ಟು ನೀ
ಕರೆದಾಗ ಕುಣಿವ
ಹೃದಯವನು ತಣಿಸಿ
ನಲಿವ ಮನಸ್ಸು

ಉತ್ತುಂಗಕ್ಕೇರಿದೆ


ಸುಧಾ ಪಾಟೀಲ

About The Author

3 thoughts on “ಸುಧಾ ಪಾಟೀಲ ಕವಿತೆ-ನಲಿವ ಮನಸ್ಸು”

  1. Meenakshi patil

    ಅತ್ಯಂತ ಭಾವಪೂರ್ಣ ಕವಿತೆ ಮೇಡಂ ಧನ್ಯವಾದಗಳು

  2. ನನ್ನ ಕವನ ಮೆಚ್ಚಿದ ಕವಿ ಮನಸುಗಳಿಗೆ ಧನ್ಯವಾದಗಳು

Leave a Reply

You cannot copy content of this page

Scroll to Top