ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾti

ಮೌನಿ ನೀನ್ಯಾಕೆ

ಅನ್ನಪೂರ್ಣ ಹಿರೇಮಠ

ಯಾಕೆ ಮೌನಿ ನೀನು ಮನವೇ
ತುಟಿಗಚ್ಚಿ ಏಕೆ ದುಃಖ ಹಿಡಿವೆ
ಹೆಪ್ಪುಗಟ್ಟಿದ ಕಣ್ಣೀರ ಕರಗಿಸಿ
ಅತ್ತು ಬಿಡು ಹರಿಯಲಿ ಮಡುಗಟ್ಟಿದ
ನೋವು ಧಾರೆಯಾಗಿ ಕೆಂಪಾದಗ ಲ್ಲ
ರಮಿಸುತ ನೇವರಿಸುತ//

ಬಿಕ್ಕಿ ಸುಕ್ಕುಗಟ್ಟಿದ ಕೊರಳು
ಬಡಿ ಬಡಿದು ತಗ್ಗು ಬಿದ್ದ ಹೃದಯ
ನಿಟ್ಟುಸಿರು ಬಿಟ್ಟೊಮ್ಮೆ
ಗುಟ್ಟುಗಳ ಬಿಚ್ಚಿಟ್ಟು ಗಟ್ಟಿ ದನಿಯಲ್ಲಿ
ಜೋರಾಗಿ ಅತ್ತು ಬಿಡು ಬಯಲು ಅಪ್ಪಿ
ಕಪ್ಪು ಮೋಡ ಕರಗಿ ಹನಿ ಗೂಡಿದಂತೆ //

ಅತ್ತು ಅತ್ತು ಕಣ್ಣೀರು ಬತ್ತಿ
ಬರಡಾಗಿದೆಯೇ ಮನದ ಹೊಲ
ಕೊರಡು ಕೊನರಲಿ ದುಗುಡ ಕೊಡವು
ಕಣ್ಮುಚ್ಚೊಮೆ ದನಿವಾರಿಸಿಕೋ
ನಡೆದುದೆಲ್ಲ ಒಳ ಮಿಂಚಿ ಮಾಯವಾಗಲಿ
ಕೊಂಚ ನೀರಾಳತೆ ಶಾಂತಿ ತರಲಿ
ಇಂಚಿಂಚಲಿ ಹುದುಗಿದ
ಒಲವ ಪ್ರೀತಿ ಪ್ರೇಮ ಮುಂಗಾರು
ತುಂತುರಿನಲಿ ಚಿಗುರಲಿ ಬಿಡು //

ಕಂತೆ ಕಂತೆ ಚಿಂತೆಯೆಲ್ಲ ನೀಗಿ
ಅಂತರಾತ್ಮ ದಿ ನೆಮ್ಮದಿಯ ನೂಕು
ದುಃಖ ದುಮ್ಮಾನಗಳು ಸಾಕು ಬಿಡು
ಇರುವಂತೆ ಇರಲಿ ಬರುವುದೆಲ್ಲ ಬರಲಿ
ಅನಂತದೊಳು ಲೀನವಾಗುವವರೆಗೆ
ಮನದಿ ಶಾಂತಿಯ ಹೊತ್ತು
ಎಲ್ಲವನು ಸ್ವೀಕರಿಸುತ
ಚಿತ್ತ ಶುದ್ದಿಗೊಳಿಸುತಿರು ಬತ್ತದಂತೆ//


ಅನ್ನಪೂರ್ಣ ಹಿರೇಮಠ

About The Author

2 thoughts on “ಡಾ ಅನ್ನಪೂರ್ಣ ಹಿರೇಮಠ-ಮೌನಿ ನೀನ್ಯಾಕೆಡಾ”

Leave a Reply

You cannot copy content of this page

Scroll to Top