ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಸ್ವಾರ್ಥ

ನೀಡಲೂ..
ಪಡೆಯಲೂ..
ಆಸೆಯೇ….
ಕಾರಣವಲ್ಲ
ಸುಖದ ಸ್ವಾರ್ಥವಿದೆ ಅಲ್ಲಿ
ದುಂಬಿಗೂ..ಹೂವಿಗೂ !!.

ಮಳೆ ಪಡೆದ
ಇಳೆಗೆನಾನು
ಹಸಿಯಾದೆ..
ಎಂಬ ಸುಖದ
ಸಂಭ್ರಮ
ಸುರಿದ ಮಳೆಗೆ
ನಾನುಸುರಿಸಿ
ಹಗುರಾದೆ..
ಎಂಬ ನಿರಾಳ !

ಹೂವುಗಳು
ಬಾಡಲೆಂದೇ…
ಅರಳುವದಿಲ್ಲ
ಕನಸುಗಳೆಲ್ಲವೂ..
ನನಸಾಗ ಬೇಕೇಂಬ
ನಿಯಮವಿಲ್ಲ

ಬರೆದರಷ್ಟೇ
ಕವಿತೆ.ಕಥೆ.ನಾಟಕ
ಕಾದಂಬರಿ !

ತಾಳಿ ಕಟ್ಟಿದರಷ್ಟೇ.
ಮದುವೆ.
ಅದೂ..ಲೇಖನಿ
ಯಿಂದಾಗಲಿ..
ಅರಿಶಿನದ
ದಾರದಿಂದಾಗಲಿ..


ಇಮಾಮ್ ಮದ್ಗಾರ


About The Author

Leave a Reply

You cannot copy content of this page

Scroll to Top