ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಧಾ ಪಾಟೀಲ

ಮುಂಗಾರು

ನೀನಿಲ್ಲದ ಮುಂಗಾರು
ರಭಸದಿ ಸುರಿದು
ನೆನಪು ಮಾಡುತಿದೆ
ನಿನ್ನ ಕೈ ಕುಲುಕು

ನಗುನಗುತ ಅರಳು
ಹುರಿದಂತೆ ಮಾತಾಡಿ
ನಿಮಿಷದಲ್ಲೇ ನನ್ನತ್ತ
ಸೆಳೆಯುವ ನಿನ್ನ
ಕುಡಿನೋಟ ನೆನಪು
ಸುರಿಯುತ್ತಿದೆ ನಿನ್ನೀ
ಪ್ರೀತಿ ಮಳೆಯು

ಹಸಿ ಮಣ್ಣಿನ ವಾಸನೆ
ಬೀಸುವ ತಂಪು
ಗಾಳಿಯಲಿ ಹರಡಿದೆ
ನಿನ್ನ ಅಂತರಾಳದ
ಸಿಹಿ ಭಾವ ಕಾವ್ಯ

ಮುಸುಲ ಧಾರೆಯಲ್ಲಿ
ನೆನೆಯುತ್ತ ನೆನೆಯುತ್ತ
ಹೊಂಗಿರಣ ಮೂಡಿಸಿ
ಹೊರಟ ನಿಂತ ನಿನ್ನ
ಮರೆಯಲಾರದ ರಸಮಯ
ಸಿಹಿ ಘಳಿಗೆಗಳು

ಬಯಸಿ ಬಂದ
ಸ್ನೇಹವ ಮುಂಗಾರಿನ
ಮಳೆಯಲಿ ತೋಯಲು
ಬಿಟ್ಟು ಬಂಧಿಯಾದೆ
ಬಿಡಿಸಲಾರದ ನಿನ್ನ
ಬಾಹು ಬಂಧನದಲ್ಲಿ

ಜಿಟಿ ಜಿಟಿ ಮಳೆಯ
ಸೊಗಡಿನಲಿ ತಣ್ಣಗೆ
ಸುಳಿದಾಡಿತು ನಿನ್ನ
ಮುದಗೊಳಿಸಿದ ಹಸಿರು
ಹನಿ ಹನಿ ಸಿಂಚನದ ಮಾತು

ಮುತ್ತುಗಳು ಭಾವ ಬಸಿರು

About The Author

3 thoughts on “ಸುಧಾ ಪಾಟೀಲಕವಿತೆ-ಮುಂಗಾರು”

  1. Raju Kalyanshetty

    ಅತ್ಯುತ್ತಮ ಸುಂದರ ಭಾವ ತೋರಣ ನಿಮ್ಮ ಈ ಕವನ ಸುಧಾ ಪಾಟೀಲ ಬೆಳಗಾವಿ

  2. ಸೋದರಿ, ತಮ್ಮ ಸ್ವರಚಿತ ಕವನ “ಮುಂಗಾರು” ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತಮ್ಮ ಕವನ‌ ಓದಿ ವರುಣದೇವ ಜಿಟಿ ಮಳೆಯ‌ ಸೊಗಡಿನಲ್ಲಿ ತಣ್ಣಗೆ ಇಂದು ಸುಳಿದಾಡುತ್ತಿದ್ದಾನೆ. ತಮ್ಮ ‌‌ಸುಂದರ ಸಾಹಿತ್ಯದ ಚಂದಾದ ಪದಗಳಿಂದ ಹೆಣೆದು ಅಂದದ ಕವನಕ್ಕೆ ನನ್ನ ಪ್ರೀತಿಪೂರ್ವಕ ವಂದನೆಗಳು, ಅಭಿನಂದನೆಗಳು. ಶುಭ ಸಂಜೆ.

  3. ನನ್ನ ಕವನ ಮೆಚ್ಚಿ ಪ್ರತಿಕ್ರಿಯೆ ನೀಡಿದ ಕವಿ ಮನಸುಗಳಿಗೆ ಧನ್ಯವಾದಗಳು

Leave a Reply

You cannot copy content of this page

Scroll to Top