ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಗಜಲ್

ವಿಜಯಪ್ರಕಾಶ್ ಸುಳ್ಯ

ಬೆಚ್ಚಗಿರಲೆಂದು ಎದೆಯೊಳಗೆ ಬಚ್ಚಿಟ್ಟಿರುವೆನು ನಿನ್ನ ನೆನಪುಗಳನು
ಹುಚ್ಚು ಮನವನೆಚ್ಚರಿಸಲು ಹಚ್ಚೆ ಹಾಕಿರುವೆನು ನಿನ್ನ ನೆನಪುಗಳನು

ಅಬುದಿಯೊಳಗಿನ ಅಲೆಗಳಬ್ಬರದಂತೆ ಭಾವನೆಗಳ ಭೋರ್ಗರೆತ
ಛಲವನು ಅಚಲವಾಗಿರಿಸಲು ಉಳಿಸಿರುವೆನು ನಿನ್ನ ನೆನಪುಗಳನು

ಸುಳಿಯದಾಗಿದೆ ನಿದಿರೆ ಸನಿಹವಿರೆ ಸಹಿಸದಸದಳ ನೋವ ಛಾಯೆ
ಹಠವಿಡಿದು ಬಾಳಲು ಹಸಿಯಾಗಿರಿಸಿರುವೆನು ನಿನ್ನ ನೆನಪುಗಳನು

ಉಸಿರು ನಿಲ್ಲುವುದಕೆ ಮೊದಲು ಉಳಿಸಿ ಹೋಗಬೇಕಿದೆ ಹೆಸರನು
ಸೋತಲ್ಲೇ ಜಯಿಸುವ ತನಕ ಅಳಿಸದಿರುವೆನು ನಿನ್ನ ನೆನಪುಗಳನು

ದ್ವೇಷದ ಉರಿಯಲಿ ತನ್ನನು ದಹಿಸಿ ವಿನಾಶವಾಗುವುದಲ್ಲ ವಿಜಯ
ಅಭಿಭವವನು ಮರೆಯಲು ಅವಗಣಿಸಿರುವೆನು ನಿನ್ನ ನೆನಪುಗಳನು


ವಿಜಯಪ್ರಕಾಶ್ ಸುಳ್ಯ

About The Author

2 thoughts on “ವಿಜಯಪ್ರಕಾಶ್ ಸುಳ್ಯ-ಗಜಲ್”

Leave a Reply

You cannot copy content of this page

Scroll to Top