ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಿಜಯಪ್ರಕಾಶ್ ಸುಳ್ಯ

ಗಜಲ್

ಅಂತರದ ಕಂದಕವದು ಮನದಿ ಮೂಡಿಸಿದ ಭಾವವು ವಿರಹ
ನಟ್ಟಿರುಳಿನಲೂ ನಿದಿರೆಯ ತಡೆಹಿಡಿಯುತಿಹ ನೋವು ವಿರಹ

ತೋಳಿನಾಸರೆ ಬಯಸುತ ಕರಗಿದ ಜೀವಕೆ ಮತ್ತದೇ ಏಕಾಂತ
ಕದಪುಗಳನು ತೋಯಿಸುವ ಕಣ್ಣೀರಿನ ವ್ಯಾಖ್ಯಾನವು ವಿರಹ

ಯೋಗವನು ಹಳಿಯಿತು ಹೃದಯ ಜಾರಿದ ಭಾಗ್ಯವ ನೆನೆದು
ಕದವನು ತೆರೆದಿರಿಸಿ ನಡೆಸುವ ಕಲ್ಪನೆಯ ವಿಹರಣವು ವಿರಹ

ಕಲ್ಮಶವಿಲ್ಲದ ಪ್ರೀತಿಯ ಕನವರಿಕೆಯಲಿ ಕಳೆಯುತಿದೆ ದಿವಸ
ಕರವಿಡಿದು ನಡೆದ ನಿನ್ನೆಗಳ ನೆನೆದು ಅರಳಿದ ನಲಿವು ವಿರಹ

ಕಣ್ಗಳ ಸಮರಂಗದಲಿ ವಿಜಯವನು ಪಡೆದವು ಬಯಕೆಗಳು
ಆಂತರ್ಯದಲಿ ಪಸರಿಸುತಿಹ ಹಿತಸ್ಪರ್ಶದ ಘಮವು ವಿರಹ


ವಿಜಯಪ್ರಕಾಶ್ ಸುಳ್ಯ

About The Author

Leave a Reply

You cannot copy content of this page

Scroll to Top