ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಬಾಗೇಪಲ್ಲಿ

This image of Pelicans is taken at Mysore in India .

ನನ್ನನು ನೆನೆಯದೆ ನೀ ಇರಬಲ್ಲೆಯಾ ಗೆಳತಿ
ನನ್ನಂತೆ ಹಸಿ ಸುಳ್ಳು ಹೇಳಬಲ್ಲೆಯಾ ಗೆಳತಿ

ಪ್ರತಿ ಹುಣ್ಣಿಮೆ ದಿನವನು ನೆನಪಿಸುತ್ತಿದ್ದ ಗೆಳತಿ
ತಿಂಗಳ ರಾತ್ರಿ ನೆನೆಪೀಗ ಇಡಬಲ್ಲೆಯಾ ಗೆಳತಿ

ಪ್ರತಿದಿನ ನನ್ನ ಸ್ಥಿತಿಯ ವಿವರಿಸುತ್ತಿದ್ದೆ ಗೆಳತಿ
ಈಗಿನ ಮೌನವ ಊಹೆ ಮಾಡಬಲ್ಲೆಯಾ ಗೆಳತಿ

ನಿನ್ನೊಡನೆಯ ಕನಸುಗಳ ವಿವರಿಸುತ್ತಿದ್ದೆ ಗೆಳತಿ
ಈಗ ಸ್ವಪ್ನದಿ ಬಾರದೆ ಹೋಗಬಲ್ಲೆಯಾ ಗೆಳತಿ

ಕೃಷ್ಣಾ! ಮಥುರೆ ಬಿಟ್ಟು ರಾಧೆಯ ಮರೆತ ಗೆಳತಿ
ರಾಧೆ ಮರೆತಂತ ಘಟನೆ ತೋರಬಲ್ಲೆಯಾ ಗೆಳತಿ


ಬಾಗೇಪಲ್ಲಿ

About The Author

1 thought on “ಬಾಗೇಪಲ್ಲಿ- ಗಜಲ್”

  1. ಪ್ರಕಾಶ ಸಿಂಗ್ ರಜಪೂತ

    ತುಂಬಾ ಸೊಗಸಾದ ಗಜಲ್ ಬೊಗಸೆ ಯರು ಸಾಗರ ಸಾಗಿದ ಗಜಲ್

Leave a Reply

You cannot copy content of this page

Scroll to Top