ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಜಾತ ಮಂಜುನಾಥ್

ಪುಸ್ತಕ

ಮಾತಾಡುತ್ತಿವೆ ಪುಸ್ತಕಗಳು ಅಕ್ಷರದಲಿ
ಜಗತ್ತು ಜಾಹಿರಾತುಗಳ ಮಾಹಿತಿ ಕುರಿತು
ಮುಂದಿನ ಭವಿಷ್ಯದ ಕ್ಷಣವನ್ನು ಅರಿತು
ಇತಿಹಾಸ ಯುಗದ ಬಗೆಬಗೆಯ ಕುರಿತು
ಸೋಲು ಗೆಲುವಿನ ಸಮಸ್ಯೆಯ ಅರಿತು
ಒಳಿತು ಕೆಡುಕುಗಳ ವಿಷಯದ ಕುರಿತು

ಹೂ ದುಂಬಿಗಳ ಒಲವಿದೆ ಪುಸ್ತಕದಲಿ
ಹಕ್ಕಿಪಕ್ಷಿಗಳ ಗಾನ ಲಹರಿ ಇದೆ ಪುಸ್ತಕದಲಿ
ಹಸಿರುಟ್ಟ ಹೊಲಗದ್ದೆ ಹುಟ್ಟಿದೆ ಪುಸ್ತಕದಲಿ
ನದಿ ಝರಿಯ ಜುಳು ಜುಳು ತುಂಬಿದೆ ಪುಸ್ತಕದಲಿ
ಶಿಲ್ಪಕಲೆಯ ರಸದೌತಣವು ಪುಸ್ತಕದಲಿ
ಸಾಧುಸಂತರ ಸಾಧನೆಯ ಮೌಲ್ಯಗಳು ಪುಸ್ತಕದಲಿ

ಅಡಗಿದೆ ಜ್ಞಾನ ಭಂಡಾರದ ನಿಧಿ ಪುಸ್ತಕದಲಿ
ಜ್ಞಾನಿಗಳಿಗೆ ಝೇಂಕಾರದ ಧ್ವನಿ ಸಂಕ್ಷಿಪ್ತದಲಿ
ನುಡಿಯುತ್ತಿವೆ ಪ್ರತಿಘಳಿಗೆಯು ವೇದದ ನುಡಿ
ಬಯಸುತ್ತಿವೆ ಇರಲು ಮಿತ್ರನಂತೆ ನಮ್ಮೊಂದಿಗೆ ದಿನವಿಡಿ
ಜ್ಞಾನವಿಜ್ಞಾನದ ಅಪರೂಪದ ಮಾಹಿತಿಯಡಿ
ನೀ ತಿಳಿಯಾಯ್ಯ ಪುಸ್ತಕದಲ್ಲಿ ಸವಿಸ್ತಾರದಡಿ


ಸುಜಾತ ಮಂಜುನಾಥ್

About The Author

Leave a Reply

You cannot copy content of this page

Scroll to Top