ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಮೊಗವ ತೋರಾ

ಬಾರಾ ಬಾರಾ ಮೊಗವ ತೋರಾ
ಒಲವಿನ ಚೆಲುವನೇ ಬೇಗ ಬಾರಾ//

ಅಗಲಿಕೆಯ ನೋವ ಸಹಿಸಲಾರೆ
ಅರೆಗಳಿಗೆ ನಿನ್ನ ಬಿಟ್ಟಿರಲಾರೆ
ಅಂತರಾತ್ಮದ ಬಯಕೆ ಹತ್ತಿಕ್ಕಲಾರೆ
ಅಂಬುದಿಯ ಬೇಗುಧಿಯ ಭೇದಿಸಲಾರೆ//

ಕಣ್ಣಂಚಿನ ಆಸೆ ಹಂಬಲಿಸಿದೆ
ತುಟಿಯಂಚಿನ ಬಯಕೆ ಕರೆದಿದೆ
ಒಡಲ ತುಡಿತ ಹಲುಬುತಿದೆ
ಕಡಲಾಳದ ಕೊರೆತಕೆ ಮನದ ದಡ ಮರುಗುತಿದೆ//

ಬಂದ ಸಂಬಂಧ ನೆನೆನೆನೆದು
ಪ್ರೀತಿ ಮಧುವನು ಅರಸಿ ಅರಸಿ
ಪ್ರೇಮರಾಗವನೇ ಹಾಡಿ ಹಾಡಿ
ಕಂಪಿಸಿದೆ ಜೀವ ನಿನ್ನ ಬೇಡಿ ಬೇಡಿ ಹುಡುಕಾಡಿ//

ಸಲುಗೇ ಸರಸ ಸಲ್ಲಾಪದ ಸವಿಯು
ಒಡನಾಟ ನಿನ್ನಾಟದ ರುಚಿಯು
ಸವಿದಷ್ಟು ಸವಿಯಬೇಕೆಂಬ ಬಯಕೆಯು
ಕಾಡುತಿದೆ ನಿನ್ನ ಸನಿಹ ಬೇಡಿ ಜೀವ ಭಾವವು//

ಒಂಟಿತನ ಬೇಸರ ತಂದಿದೆ
ಜೊತೆ ಬೇಡಿ ತಲ್ಲಣಗೊಂಡಿದೆ
ಉಸಿರು ಕಸಿಬಿಸಿಗೊಂಡು ಬಳಲುತಿದೆ
ಬಯಕೆ ಬಾಂದಳ ಬಿಡದೆ ಮರೆಯದೆ ಅಳುತಿದೆ//


About The Author

Leave a Reply

You cannot copy content of this page

Scroll to Top