ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನುರಾಧಾ ಶಿವಪ್ರಕಾಶ್

ಸೊಬಗಿ‌ನ ಸಿಂಗಾರಿ

ಅರಳು ಮಲ್ಲಿಗೆ ನಗುವ ಸೊಬಗಿಗೆ
ಸೋತು ಹೋಗುವುದೀ ಮನ
ಎದೆಯ ಒಳಗಡೆ ಮಧುರ ಭಾವವು
ಅರಳಿ ಚಿಮ್ಮುವುದೀ ಕ್ಷಣ /೧/

ಕಳೆದ ಬಾಲ್ಯದ ನೆನಪು ಕಾಡಲು
ಮೊದಲ ಕಾರಣ ಈ ಘಮ
ಹೂವ ರಾಶಿಲಿ ಆಯ್ದು ಹೆಕ್ಕಲು
ಮೊದಲ ಆದ್ಯತೆ ಈ ಸುಮ ‌/೨/

ಬರಿದೆ ದಾರದಿ ಭಾವ ಪೋಣಿಸೆ
ಮಾಲೆಯಾಗುವುದೀ ಬಗೆ
ಮುಡಿಯನೇರುವ ಸಮಯ ಕಾದಿರೆ
ಮೊಗದಿ ಅರಳಿದೆ ನಸುನಗೆ /೩/

ಮಂದ ಗಾಳಿಯು ಮೆಲ್ಲ ಬೀಸಲು
ಗಂಧವೆಲ್ಲೆಡೆ ಹಬ್ಬಿದೆ
ಸಂಜೆ ತಂಪಲಿ ಕಂಪಿನೋಕುಳಿ
ನಾರಿ ಮನಸು ನಲಿದಿದೆ‌/೪/

ಬಾಡಿ ಹೋಗುವ ಕ್ಷಣಿಕ ಬಾಳಲಿ
ಸುತ್ತ ಸಂತಸ ಚೆಲ್ಲಿದೆ
ನೋಡಿ ತಣಿವ ನಯನದ್ವಯದಿ
ತೃಪ್ತ ಭಾವವು ತುಂಬಿದೆ /೫/


ಅನುರಾಧಾ ಶಿವಪ್ರಕಾಶ್

About The Author

Leave a Reply

You cannot copy content of this page

Scroll to Top