ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಧಾ ಪಾಟೀಲ್

ಕಣ್ಣುಮುಚ್ಚಾಲೆ

ವರುಣನ ಆಗಮನದಿ
ನೇ ನೆನಪಾದೆ
ಕಚುಗುಳಿಯಿಡುತಾ
ಮನದಲಿ ನಿಂದೆ

ಏನೋ ಹೇಳಲು
ಕಣ್ಣೆತ್ತಿ ನೋಡಿದಾಗ
ತೆರೆದ ಆಲಿಂಗನದಿ
ನನ್ನಪ್ಪಲು ಕಾದು
ನಿಂತಿದ್ದೆ

ಒಳಿತೋ ಕೆಡಕೋ
ನಾ ಅರಿಯೆ
ಈ ನಿನ್ನ ಸಂಗ
ಏನೂ ಅರಿಯದೆ
ನಾ ಒಪ್ಪಿಕೊಂಡೆ

ಕಣ್ಣು ಮುಚ್ಚಾಲೆ
ಆಡುತ ಕಳೆಯಬೇಡ ಕಾಲ
ಹೇಳಲಾರದೆ ಹೋಗಬೇಡ
ನಿನ್ನ ಮನದಿಂಗಿತವ

ಕಾದೆ ಇಷ್ಟು ದಿನ
ಪ್ರೀತಿಯ ಪಯಣಿಗನಿಗೆ
ಕೂಡಿ ಪಯಣಿಸಲು
ಈ ಜೀವನವೆಂಬ
ಉಯ್ಯಾಲೆಯಲ್ಲಿ


ಸುಧಾ ಪಾಟೀಲ್

About The Author

Leave a Reply

You cannot copy content of this page

Scroll to Top