ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದ ಸಂಗಾತಿ

ನನ್ನ ನೆನಪಿನಲ್ಲಿಡಿ

ಮೂಲ ಬೆಂಗಾಲಿ: ಗುರು ರವೀಂದ್ರರು

ಕನ್ನಡಕ್ಕೆ:ಬಾಗೇಪಲ್ಲಿ ಕೃಷ್ಣಮೂರ್ತಿ

ನಾನು ಬಹಳ ದೂರಕೆ ಹೋದರೂ ಸಹ
ಹಳೆಯ ಪ್ರೇಮ ಪ್ರಸಂಗದಿಂ ಹೊರಬಂದು ಹೊಸ ಪ್ರೇಮ ಪ್ರಸಂಗದಲಿದ್ದರೂ ಸಹ
ದಯಮಾಡಿ ನನ್ನ ನೆನಪಿನಲ್ಲಿರಿಸಿ

ನಾನು ಸನಿಹವಿದ್ಧರೂ ಸಹ
ನೀವೆನ್ನನು ಕಾಣಲಾರದಿದ್ದರೂ ಸಹ
ಯನೆರಳಿನಂತೆ ನಾನಿದ್ದು ಇಲ್ಲದಿದ್ದರೂ ಸಹ
ನಾನಿರುವೆ
ದಯಮಾಡಿ ನನ್ನ ನೆನಪಿನಲ್ಲಿರಿಸಿ

ತಾವೆಷ್ಟೇ ಕಣ್ಣೀರು ಹರಸಿದರೂ
ಸಕಲವೂ ಒಂದು ನಡು ರಾತ್ರಿಯಲೇ ಅಂತ್ಯಗೊಂಡರೂ
ಶರತ್ಕಾಲದೊಂದು ಬೆಳಗಿನಲಿ ಶ್ರಮವೆಲ್ಲಾ ವಿಫಲವಾದರೂ ಸಹ
ದಯಮಾಡಿ ನನ್ನ ನೆನಪಿನಲ್ಲಿರಿಸಿ

ಕಳದು ಹೋದ ದಿನಗಳ ನೆನಪಿನಿಂದ ಕಣ್ಣೀರಹನಿ ಮರುಕಳಸಲಾರದಷ್ಟೇ ಆದರೂ ಸಹ
ನನ್ನನ್ನು ನೆನಪಿನಲ್ಲಿರಿಸಿ.


About The Author

Leave a Reply

You cannot copy content of this page

Scroll to Top