ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ,ತಾಜಪುರ

ಏತಕೆ ಬೇಸರ ಗೆಳೆಯ

ಏತಕೆ ಗೆಳೆಯ ಈ ಪರಿ ಬೇಸರ !
ಕಂಡಿತು ಮುಖದಲಿ ನೋವಿನ ನೇಸರ !!

ಮುದ್ದು ಮಗು ಬರಲಿಲ್ಲ ಓದಿ ಮುಂದೆ !
ಸಾಕು ಬಿಡು ಸ್ವಂತ ದುಡಿದು ತಿನ್ನಲಿ ಇಂದೆ !!

ಮಗಳಿಗೆ ನಡೆಸಿದೆ ವರನ ಹುಡುಕಾಟ !
ಸೋತು ಗೊಣಗಿದೆ ಇದಾವ ಜನ್ಮದ ಕಾಟ !!

ಕಾಡಿತು ಸ್ವಂತ ಸೂರಿಲ್ಲವೆಂಬ ಚಿಂತೆ !
ಹೋಗಲಿ ಬಿಡು,ಹಲವರ ವಾಸವೇ ಈಗ ಕೊಳಗೇರಿ ಸಂತೆ !!

ಸತಿಯ ಮಹದಾಸೆ ಕಂಠಕೆ ಚಿನ್ನದ ಕಾಸಿನ ಸರ !
ನಿನಗೆ ದುಡ್ಡು ಹೊಂದಿಸಲಾಗದ ನೋವು ಮರಮರ !!

ತಪ್ಪಲಿಲ್ಲವಲ್ಲ ನೆರೆ ಹೊರೆಯವರ ಮತ್ಸರ !
ಅದೇಕೋ ನಿಲ್ಲಲಿಲ್ಲ ಅವರ ತೊಂದರೆ ತರತರ !!

ನೀನಾದೆ ನಂಜುಂಡ ನೋವು ಅಪಮಾನ ನುಂಗಿ !
ನಿನ್ನ ಸಮ ಯಾರಿಲ್ಲ ಗೆಳೆಯ ಆದರೂ ನೀನು ಏಕಾಂಗಿ !!


About The Author

Leave a Reply

You cannot copy content of this page

Scroll to Top