ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗುಣಾಜೆ ರಾಮಚಂದ್ರ ಭಟ್

ನೋವಿಗೆ ಮದ್ದು : ಬುದ್ಧ

Little Buddha /mass merchandise

ಅರಳಿಯ ಬಿತ್ತರ ಮರದಡಿ ಧ್ಯಾನವ
ಮರಳಿಯೆ ಮಾಡಿ ಬೆಳಗಿದನು.

ಲೋಕದಿ ಹಿಂಸೆಯು ಶೋಕವ ಹೆಚ್ಚಿಸಿ
ನಾಕವ ದೂರ ಸರಿಸಿಹುದು..

ಬುದ್ಧನು ಜನಿಸಿದ ,ಸಿದ್ಧಿಯ ಸಾಧಿಸಿ
ಸಿದ್ಧನು ಮೋಕ್ಷ ಪಡೆದದಿನ..

ಭೋಗವ ತ್ಯಜಿಸುತ ಲೋಗರ ನೋವನು
ನೀಗಲು ನೀನು ಧ್ಯಾನಿಸಿದೆ..

ಹುಣ್ಣಿಮೆ ದಿವಸವೆ ಕಣ್ಣನು ತೆರೆಸಲು
ತಣ್ಣನೆ ಶಾಂತಿ ಪಸರಿಸಿದೆ..

ಮನಸಿನ ವೇಗವ ಮನನದಿ ಗೆಲ್ಲುತ
ಜನಮನವನ್ನು ಬೆಳಗಿಸಿದೆ..

ಸಾವಿರ ಬುದ್ಧರು ನಾವಿಹ ಲೋಕದ
ನೋವಿಗೆ ಮದ್ದು ಗುಣಪಡಿಸೆ ..

ಲೋಗರ =ಜನರ .

ಗುಣಾಜೆ ರಾಮಚಂದ್ರ ಭಟ್

About The Author

1 thought on “ಗುಣಾಜೆ ರಾಮಚಂದ್ರ ಭಟ್ ಕವಿತೆ-ನೋವಿಗೆ ಮದ್ದು : ಬುದ್ಧ”

  1. ಸಕಾಲಿಕ ಕವನವನ್ನು ಪ್ಪಕಟಿಸಿ ಪ್ರೋತ್ಸಾಹಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಮಸ್ತೆ .

Leave a Reply

You cannot copy content of this page

Scroll to Top