ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಾಂತ ಜಯಾನಂದ್

ಅಭಿಜ್ಞಾನ

ಮುದ್ರೆಯುಂಗುರಕ್ಕಷ್ಟೇ ಸೀಮಿತ,
ಪ್ರೀತಿಯ ಪರಾಕಾಷ್ಟೆ,

ಕಣ್ವರಲ್ಲಿ ಬೆಳೆದರೇನೋ,
ಕಾಮ, ಮೋಹವ
ಗೆಲ್ಲಲಾಗಲಿಲ್ಲ,

ಅಭಿಜ್ಞಾನ ವಿಲ್ಲದೆ ನೆನಪಾಗ
ದೊಲ್ಲದು, ಗಂಧರ್ವ ವಿವಾಹ
ಪ್ರೀತಿ, ಪ್ರೇಮ
ಕಿರೀಟದ ಭಾರದಲಿ,

ಶಾಪ, ದೂರ್ವಾಸನದು,
ಮನೆ, ಮಾಡು, ಮೋಹಗಳಿಂದಾದ
ಹೊರತಾದವನು,

ಮೋಹದ ಮಳೆಯಲ್ಲಿ
ಮಿಂದೆದ್ದ ವಳಿಗೆ
ಹಬ್ಬಿದ ಮಂಕು
ಏನೂ ಕಾಣದಾಯ್ತು,

ನದಿಯಲ್ಲೇ ಕೈ ಜಾರಿಸಿ
ಕೊಂಡ, ಮುದ್ರೆಯುಂಗುರ,
ಒಡಲಲ್ಲಿ ಮಗುವಿರಿಸಿ
ಕೊಂಡವಳ
ನೋವು, ನಲಿವು ಅವಳಿಗಷ್ಟೆ,

ತಪ್ಪು,
ವಿಶ್ವಾ ಮಿತ್ರನದೂ ಅಲ್ಲ
ಮೇನಕೆಯದೂ ಅಲ್ಲ,
ರಾಜನದೂ ಅಲ್ಲ
ಋಷಿಯದೂ ಅಲ್ಲ,

ಭ್ರಮೆಗೆ ಒಳಗಾಗಿ
ಮೈ ಮನಸೊಪ್ಪಿಸಿ
ಕೊಂಡವಳು ಇವಳು.


ಶಾಂತ ಜಯಾನಂದ್

About The Author

5 thoughts on “ಶಾಂತಾ ಜಯಾನಂದ್ ಕವಿತೆ-ಅಭಿಜ್ಞಾನ”

  1. Kalpana Chandrashekar

    ಶಕುಂತಲ ಳ ಚಿತ್ರಣ ಬಲು ಸೊಗಸಾಗಿದೆ ಕಾವ್ಯ ವನ್ನು ಚಿಕ್ಕ ಚೊಕ್ಕವಾಗಿ ಹೇಳಿರುವುದು ಮುದ ನೀಡುತ್ತದೆ

  2. ಬರಹ ಅಮೋಘ……ತಪ್ಪು ಯಾರದೆಂಬ ಜಿಜ್ಞಾಸೆಯಲ್ಲಿ ನಾನಿದ್ದೇನೆ ಈಗ….

Leave a Reply

You cannot copy content of this page

Scroll to Top