ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ದಿನಕರ ಸಿ ಕೋರಿಶೆಟ್ಟರ.

ಧರೆಗಿಳಿದ ಸ್ವರ್ಗ.

ಅವನಿಯ ಮೇಲಿಹ ಅರಣ್ಯದಲಿ
ಅಪರೂಪದ ಸುಂದರ ಸರೋವರ
ಮನದುಂಬಿ ಆಸ್ವಾದಿಸಲದುವೆ
ನಯನ ಮನೋಹರ ಸ್ವರ್ಗ.

ಸ್ವಚ್ಛ ಶುದ್ಧ ತಿಳಿ ನೀರಿನಲಿ
ನೀಲಾಗಸವು ಪ್ರತಿಫಲಿಸುತಿರಲು
ಸೂರ್ಯ ಚಂದ್ರ ಗ್ರಹ ತಾರೆಗಳ
ಇಂದ್ರನೊಡ್ಡೋಲಗದ ರಾಜ್ಯಬಾರ.

ಸುತ್ತ ಮುತ್ತ ಹಚ್ಚ ಹಸುರಿನ
ಗಿಡ ಮರ ಲತೆಗಳ ಮದ್ಯದಲಿ
ಹಾಡುತಿಹವು ಇಂಪಾದ ಸ್ವರದಲಿ
ಕೋಗಿಲೆಗಳು ಹಕ್ಕಿ ಪಕ್ಕಿಗಳು.

ವನ್ಯಜೀವಿಗಳ ನೀರಾಟದ ಸದ್ದಿನಲಿ
ಶುಕಗಳ ಸುಶ್ರಾವ್ಯ ಕಾವ್ಯ ವಾಚನದಲಿ
ಮಂಡೂಕಗಳ ವಟಗುಟ್ಟುವಿಕೆಯಲಿ
ಬೃಂಗ ಕ್ರಿಮಿ ಕೀಟಗಳ ವಾದ್ಯಗೋಷ್ಠಿ.

ವಾಯುದೇವನ ಇಚ್ಛೆಯನುಸಾರ
ದಣಿವಿಲ್ಲದೆ ಅತ್ತಲಿತ್ತ ನೃತ್ಯ ಮಾಡುತಿಹ
ಅರಳಿ ನಿಂತಿಹ ಕಮಲಗಳು ಆಗಿಹವು
ರಂಭೆ ಊರ್ವಶಿ ಮೇನಕೆ ತಿಲೋತ್ತಮೆ.

ಕಂಡೆಡೆ ಜಿಹ್ವೆಯಲಿ ಜಲ ಜಿನಗುವ
ರುಚಿಕರ ಹಣ್ಣು ಹಂಪಲಗಳಿರಲು
ಸ್ವರ್ಗವಿಳಿದು ಧರೆಗೆ ಬಂದಿಹುದು
ಇಂದ್ರೀಯಗಳ ದಾಹ ತಣಿದಿಹುದು.


ದಿನಕರ ಸಿ ಕೋರಿಶೆಟ್ಟರ.

About The Author

3 thoughts on “ದಿನಕರ ಸಿ ಕೋರಿಶೆಟ್ಟರ ಕವಿತೆ-ಧರೆಗಿಳಿದ ಸ್ವರ್ಗ.”

  1. ಮನದ ಬಯಕೆ ಕಾವ್ಯದ ಮೂಲಕ ವ್ಯಕ್ತಪಡಿಸಿದ ನಿಮ್ಮ ಪರಿಗೆ ವಂದನೆಗಳು ✨

Leave a Reply

You cannot copy content of this page

Scroll to Top