ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬುದ್ಧ ಬಂದ

ಡಾ ಅನ್ನಪೂರ್ಣ ಹಿರೇಮಠ

ಬುದ್ಧ ಬಂದ ಜಗಕೆ ಬೆಳಕು ಚೆಲ್ಲಲು
ಶಾಂತಿ ಮಂತ್ರ ಪಠಿಸಿ ನೆಮ್ಮದಿಯ ನೀಡಲು//ಪ//

ಆಸೆಯಿಂದ ದುಃಖ ನಿಮ್ಮನಗಲದೆಂದನು
ಬಳಲಿಕೆಯು ನಮಗೆ ನೋವ ಕೊಡದಿರದು
ಕೂಡಿಟ್ಟ ಸಂಪತ್ತು ಭಯ ಬಿಡಿಸದೆಂದನು
ಭೋಗ ಲಾಲಸೆಗಳಿಂದ ಭವಣೆ ತಪ್ಪದೆಂದನು//

ವರ್ಗ ವರ್ಣ ಜಾತಿ ಮತ ಬೇಡವೆಂದನು
ರೋಗ ರುಜಿನ ಮರಣದಂಜಿಕೆ ಬಿಡಿರೆಂದನು
ಜ್ಞಾನದಾಹದಿ ಬಳಲದೆ ಇರಬೇಡಿರೆಂದನು
ಧರ್ಮ ಸಮನ್ವಯತೆಯ ಮರಿಬೇಡಿರೆಂದನು//

ಜನರ ಹಿತ ಜಗದ ಹಿತ ಮನದ ಹಿತವಾಗಲಿ
ಮನಶ್ಶಾಂತಿ ಪಡೆದು ಎಲ್ಲ ಬದುಕುವಂತಾಗಲಿ
ಸತ್ಚಿಂತನೆ ಸದಾಚಾರ ಸಮನ್ವಯತೆ ನಂಬಿಕೆಯಿರಲಿ
ಪಾವಿತ್ರ್ಛತೆಯೇ ಜೀವನದ ಆಧಾರವಾಗಲಿ //

ಅರುಹಿನ ದಾರಿ ತುಳಿದು ಮಹಾಪುರುಷನಾದ
ತೋರಿ ಎಲ್ಲರಿಗೂ ಸನ್ಮಾರ್ಗವನು ಸಂತನಾದ
ಮಡದಿಮಗು ಎಲ್ಲ ತ್ಯಜಿಸಿ ಲೋಕದಿ ವಿರಕ್ತನಾದ
ಅಹಿಂಸಾ ತತ್ವ  ಸಾರಿ ಜಗದಿ ಸತ್ಯವಂತನಾದ//

ತಪವಗೈದು ಎಲ್ಲ ಗೆದ್ದು ಬುದ್ಧನಾದ
ಸರಳ ಉಪದೇಶ ಸಾರಿ ಸಿದ್ಧನಾದ
ದುಃಖದಿಂದ ಮುಕ್ತರಾಗೊ ಮಾರ್ಗತೋರಿದ
ಆಸೆಯೇ ದುಃಖಕ್ಕೆ ಮೂಲವೆಂದು ಪರಿತ್ಯಾಗಿಯಾದ//


ಡಾ ಅನ್ನಪೂರ್ಣ ಹಿರೇಮಠ

About The Author

1 thought on “ಡಾ ಅನ್ನಪೂರ್ಣ ಹಿರೇಮಠ ಕವಿತೆ-ಬುದ್ಧ ಬಂದ”

  1. Very nice and meaningful words that itself will give pleasure to the mind that means your wordings

Leave a Reply

You cannot copy content of this page

Scroll to Top