ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಿದ್ದಲಿಂಗಪ್ಪ ಬೀಳಗಿ

ತನಗಗಳು

೧
ರೆಕ್ಕೆ ಬಲವ ನಂಬಿ
ಹಕ್ಕಿ ಬಾನಿಗೇರಿತು
ಪುಕ್ಕಲು ಸ್ವಭಾವದ್ದು
ಗೂಡಲೇ ಉಳಿಯಿತು
೨
ಬೆತ್ತಲೆ ಮರವದು
ವಸಂತಕೆ ಚಿಗುರಿ
ಸುತ್ತಲ ಜಗವೆಲ್ಲ
ಹಸಿರುಟ್ಟ ಸುಂದರಿ
೩
ಅವ್ವನ ರೊಟ್ಟಿಯಲಿ
ನೂರು ತರದ ಚಿತ್ರ
ನಗುವ ಮುಖತುಂಬ
ನನ್ನದೇ ಭಾವಚಿತ್ರ
೪
ಹರೆಯವದು ಸದಾ
ಉಕ್ಕುವ ಜ್ವಾಲಾಮುಖಿ
ಹರಿಯ ಬಿಟ್ಟರದು
ಬೆಂಕಿಗೆ ಮುಖಾಮುಖಿ
೫
ಬೆಟ್ಟದ ತುದಿಯಲಿ
ಹುಟ್ಟಿ ಬೆಳೆವ ಮರ
ಕಷ್ಟ ಮೆಟ್ಟಿ ನಿಲ್ಲುವ
ಬದುಕದು ಸಮರ


ತನಗಗಳು

About The Author

Leave a Reply

You cannot copy content of this page

Scroll to Top