ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ಉರಿವ ಕೊಳ್ಳಿಯಾಗು ಈ ಜನರ ನಡುವೆ
ಇರಿಯುವ ಶರವಾಗು ಈ ಜನರ ನಡುವೆ

ದುಷ್ಟ ಜಗತ್ತಿನಲಿ ಬದುಕುವುದು ಹೇಗೆ
ಕಚ್ಚುವ ಸರ್ಪವಾಗು ಈ ಜನರ ನಡುವೆ

ಕಪಟಿಗಳ ಸಹವಾಸ ನಿತ್ಯವೂ ಸರಿಯಲ್ಲ
ಕೊಲ್ಲುವ ವಿಷವಾಗು ಈ ಜನರ ನಡುವೆ

ಭಯದ ಪರಿಸರವೆ ತುಂಬಿ ತುಳುಕುತ್ತಿದೆ
ಮದವೇರಿದ ಗಜವಾಗು ಈ ಜನರ ನಡುವೆ

ಮದ್ದು ಗುಂಡುಗಳ ಜೊತೆಯಲಿ ಬದುಕು
ಅಭಿನವಗೆ ಪದವಾಗು ಈ ಜನರ ನಡುವೆ


About The Author

Leave a Reply

You cannot copy content of this page

Scroll to Top