ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪರಿಮಳ ಎನ್. ಎಂ.

ಹಾರೈಕೆ

ಮೆರೆಯದಿರು
ನಾನು ನನ್ನದಂಬ ಅಹಂಕಾರದಲಿ
ಈ ಭೂಮಿಯಲಿ

ನಡೆಯದಿರು
ಅಜ್ಞಾನದಲಿ ಸುಟ್ಟು ಬೂದಿಯಾಗುವೆ
ಈ ಜೀವಿತದಲಿ

ಸಹಕಾರದಲಿ
ಸಾಗು ನಾನುನನ್ನವರೆಂಬ
ಅರಿವಿನಲಿ

ಹಸನಾಗುವುದು ಬದುಕು
ನಡೆದರೆ ಸನ್ನಡತಯಲಿ ಪ್ರಜ್ವಲಿಸು
ಈ ಧರೆಯಲಿ

ಕಲಿತು ಬಿಡು
ನುಡಿದಂತೆ ನಡೆಯಲು ಕಲಿತು ಬದುಕು
ಈಜೀವನದ ಪಯಣದಲಿ

ಶುಭಚಿಂತೆಗಳ ಸುಧೆ
ಹರಿಯಲಿ ನಿನ್ನತನದ ಜ್ಯೋತಿ ಬೆಳಗಲಿ
ಈ ತಮದಲಿ

ಸಕಲವೂ ಸಿದ್ದಿಯಾಗಲಿ
ಸರ್ವವೂ ಪ್ರಾಪ್ತಿಯಾಗಲಿ
ಬಅರತಾಂಬೆಯ ಕೃಪೆಯಲಿ


About The Author

Leave a Reply

You cannot copy content of this page

Scroll to Top