ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಸವ ಜಯಂತಿ ವಿಶೇಷ

ಹೆಚ್. ಎಸ್. ಪ್ರತಿಮಾ ಹಾಸನ್.

ಬಾಗಿದರು ಬಸವಣ್ಣ

ಶರಣರಿಗೆ ಶರಣೆಂದು ಬಾಗಿದರು ಬಸವಣ್ಣ
ಪರಮಪಾವನನು ಸಂಗಮದೇವನು
ಹಿರಿಯರನು ಕಿರಿಯರನು ಒಂದಾಗಿ ಕಂಡವನು
ಸುರವೃಕ್ಷ ತಾನಾದ ಲಕ್ಷ್ಮಿದೇವಿ

ಜಾತಿಭೇದವ ತೊರೆದು ಎಲ್ಲರೊಳಗೊಂದಾಗಿ
ನೀತಿಯನು ಸಾರಿದರು ಸಂಗಮದಲಿ
ಜಾತವೇದರ ಮಹಿಮೆ ಜಗದಗಲ ಪಸರಿಸುತ
ಜ್ಯೋತಿಯನು ಹಚ್ಚಿದರು ಲಕ್ಷ್ಮಿದೇವಿ

ಬಿಜ್ಜಳನ ಆಸ್ಥಾನದಲಿ ಮಂತ್ರಿ ಕಾಯಕದಿ
ಸೌಜನ್ಯ ತೋರಿದರು ನಿಷ್ಠೆಯಿಂದ
ಈ ಜಗಕೆ ಮಾದರಿಯು ಎಂದು ಕೊಂಡಾಡಿದರು
ಸಜ್ಜನರ ಸಂಕುಲವು ಲಕ್ಷ್ಮಿದೇವಿ

ಭಾವಗಳು ನಶಿಸುವುವು ಸ್ಪಂದನೆಯು ದೊರೆಯದಿರೆ
ತಾವದುವು ಬಲುಹಿತವು ಭಾವುಕರ ಮನಸು
ಬೇವನ್ನು ಬಿತ್ತಿದರೆ ಮಾವುಫಲ ನೀಡುವುದೆ
ಭಾವ ನಶಿಸದೆ ಇರಲಿ ಲಕ್ಷ್ಮಿ ದೇವಿ


About The Author

Leave a Reply

You cannot copy content of this page

Scroll to Top