ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಿದ್ದಲಿಂಗಪ್ಪ ಬೀಳಗಿ

ಚುಟುಕುಗಳು


ನಿತ್ಯ
ಏರುತ್ತಲೇ ಇದೆ
ಚಿನ್ನದ ದರ
ಉರಿಸುತ
ಜನ ಸಾಮಾನ್ಯರ
ಉದರ

ಮುಚ್ಚುವ
ಜಾಗೆಯೊಂದನು ಬಿಟ್ಟು
ಎಲ್ಲವೂ
ಬೆತ್ತಲೆ
ಬುದ್ಧಿ ಹೇಳುವವರ
ಮಾತಿಗಿಲ್ಲ
ಕಿಂಚಿತ್ತೂ
ಬೆಲೆ

ಅವನೆಂದ;
ಚಂದ ನೋಡು ಸಖಿ
ನಿನ್ನ ಒಲವು ತುಂಬಿದ
ಈ ನೋಟ!
ಅವಳೆಂದಳು;
ಇಲ್ಲ ಅಂದವರಾರು ಪ್ರಿಯ
ತುಂಬುತಿರು ಆಗಾಗ
ನನ್ನ ಉಡಿಗೆ ನೋಟು!!


About The Author

3 thoughts on “ಸಿದ್ದಲಿಂಗಪ್ಪ ಬೀಳಗಿ-ಚುಟುಕುಗಳು”

    1. ಗಂ.ಮಾ.ಜಾಲಿಬೆಂಚಿ.

      ಚುಟುಕಿನಲ್ಲೇ ಕುಟುಕುವ ಕಲೆ ಚೆನ್ನಾಗಿದೆ.

Leave a Reply

You cannot copy content of this page

Scroll to Top