ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಲಲಿತಾ ಕ್ಯಾಸನ್ನವರ

ಕಿರುನೋಟ

In love.people in love

ಮುಸ್ಸಂಜೆಯ ಹೊತ್ತಲ್ಲಿ ನಿನ್ನ ಪ್ರೀತಿ
ನಿನ್ನ ಒಂದು ಕಿರು ನೋಟ ಭಾವಲಹರಿ
ಸದ್ದು ಮಾಡದೆ ಗೆದ್ದು ಬಿಟ್ಟಿತು ನನ್ನ ಹ್ರದಯ
ಏನು ಗೊತ್ತಾಗದೆ ಕಚಗುಳಿ ಇಟ್ಟಂತೆ ಭಾಸವಾಗಿದೆ

ಮುಡಿದ ಮಲ್ಲಿಗೆಯು ಮಾತು ಕೇಳದಾಯಿತು
ತುಟಿಗೆ ಹಚ್ಚಿದ ಬಣ್ಣ ತಂತಾನೆ ಕೆಂಪಾಯಿತು
ಕಣ್ಣಿನ ಕಪ್ಪು ನಿನ್ನದೇ ಧ್ಯಾನದಲ್ಲಿ ಮಂಪಾಯಿತು
ನನ್ನೀನಿಯ ನಿನ್ನ ಕಿರುನೋಟದಿಕಣ್ಣಂಚು ತಂಪಾಯಿತು

ನಿನ್ನ ಒಂದು ಸ್ಪರ್ಶ ಸಾಕು ಜೀವನಕೆ
ನಿನ್ನಯ ಮುಗುಳ್ನಗೆ ನನಗೆ ಸಾರ್ಥಕತೆ
ಬದುಕಿನ ಯಾನದಲ್ಲಿ ಮುನ್ನುಡಿಯು ನೀ ತಾನೇ
ಬದುಕೆಂಬ ತೀರದಲಿ ‌ಹಿನ್ನುಡಿಯು‌ ನೀನೇ

ಅರೆದೆರದ ಬಾಗಿಲುಗಳನ್ನು ತೆರೆದು ಬಿಡಿ
ನನ್ನೋಲವ ನೀವು ಹಂಚಿಕೊಂಡು ಬಿಡಿ
ನಾಚಿಕೆ ಪರದೆ ಕಿತ್ತೋಗೆದು ಬಂದೆಬಿಡುವೆ
ನಿಮ್ಮ ತೋಳ್ ತೆಕ್ಕಯಲಿ ನನ್ನ ನಾ ಮರೆತುಬಿಡುವೆ


About The Author

Leave a Reply

You cannot copy content of this page

Scroll to Top