ರೋಹಿಣಿ ಯಾದವಾಡ-ತನಗಗಳು

ಕಾವ್ಯ ಸಂಗಾತಿ

ರೋಹಿಣಿ ಯಾದವಾಡ

ತನಗಗಳು

೧) ಮನದ ಭಾವವನ್ನು
ಅರಿಸಿದೆ ನಿನ್ನಲ್ಲಿ
ತೆರೆದು ನೋಡದನ್ನು
ಬಿಚ್ಚು ಮನಸ್ಸಿನಲ್ಲಿ

೨) ಇರಲಿ ಪ್ರೀತಿ ಕೊಂಚ
ಹರಿಸಲು ಸಖಿಗೆ
ಸುಪತ್ತಿನಲ್ಲಿ ಮಂಚ
ತೂಗುತಿದೆ ಬಾಳಿಗೆ

೩) ವಿರಹದ ವೇದನೆ
ಸಹಿಸಿ ಕರಗಿದೆ
ನೆನಪಿನ ಭಾವನೆ
ಬದುಕ ಬೆಳಗಿದೆ

೪) ಮಾಡಿರುವೆ ನಿನ್ನಲಿ
ಪ್ರೇಮದ ನಿವೇದನೆ
ಕಾದಿರುವೆ ಬಾಳಲಿ
ಇರಲಿ ಸಂವೇದನೆ

೫) ಹುಸಿಮುನಿಸ ಕೋಪ
ತಾಳದೆ ಬಳಲಿದೆ
ಪ್ರೀತಿಯಲಿ ಆಲಾಪ
ತೋರಲು ಸುಖಿಸಿದೆ

೬) ನೀ ಕೊಟ್ಟ ಮುತ್ತೊಂದಲಿ
ಜಗತ್ತನೆ ಮರತೆ
ಎಚ್ಚೆತ್ತ ಭಾವದಲಿ
ಪ್ರೀತಿಸುದ ಕಲಿತೆ

೭) ಅವ್ವನ ಮಡಿಲಿಗೆ
ಸೇರಲು ಬಾಳಸುಖ
ಅಪ್ಪನ ಹೆಗಲಿಗೆ
ಏರಲು ಸ್ವರ್ಗಸುಖ

೮) ಮನಸ್ಸಿನ ಭಾವಕೆ
ತೊಳಲಾಡಿತು ಮನ
ಭಾವದ ತಾಕಲಾಟಕೆ
ಕರಗಿತುವ ಕದನ

೯) ಮನದ ನೋವುಗಳ
ಹೇಗೆ ತಾಳಲಿ ಹೇಳು
ಬಾಳುವ ರೀತಿಗಳ
ಹೇಳುವೆನಿಲ್ಲಿ ಕೇಳು

೧೦) ಸ್ನೇಹವನು ಬೆಳೆಸಿ
ಕಾಡಿಸದಿರು ನನ್ನ
ಪ್ರೀತಿಯನು ಉಳಿಸಿ
ಬಿಡದಿರು ನೀನೆನ್ನ.


About The Author


Comments

Leave a Reply

You cannot copy content of this page