ಪ್ರೊ ರಾಜನಂದಾ ಘಾರ್ಗಿ ಕವಿತೆ-ಭಾವ ತರಂಗ

ಕಾವ್ಯಸಂಗಾತಿ

ಪ್ರೊ ರಾಜನಂದಾ ಘಾರ್ಗಿ

ಭಾವ ತರಂಗ

ಅಂತರಂಗದ ಅಲೆಗಳಲ್ಲಿ
ತೇಲುತಿವೆ ಮೃದು ಭಾವಗಳು
ಬೆಚ್ಚಗೇ ತುಡಿಯುತಿವೆ
ಕಾಯುತಿವೆ ದಡ ಸೇರಲು

ಕಣ್ಣಂಚಿನ ಕನಸುಗಳಿಗೆ
ಅರಳಿ ನನಸಾಗುವ ಕಾತುರ
ತುಟಿಯಂಚಿನ ಮುಗುಳುನಗೆ
ಪಡುತಿದೆ ನಿನಗಾಗಿ ಸಾದರ

ಮಾತುಗಳು ಹೂತು ಹೋಗಿವೆ
ಒಡಳಾಳದ ತೊಳಲಾಟದಲಿ
ಎದೆಯ ತಮ್ಮಟ ಬಾರಿಸುತಿದೆ
ನಿರೀಕ್ಷೆಗಳ ಹೊಯ್ದಾಟಗಳಲಿ

ಸಪ್ತ ಸ್ವರಗಳು ನುಡಿಯುತಲಿವೆ
ಮನದಲಿ ಯುಗಳಗೀತೆ ಹಾಡುತ
ಎಬ್ಬಿಸುತಲಿವೆ ಭಾವ ತರಂಗಗಳ
ನೀ ಬರುವ ದಾರಿಯಲಿ ಕಾಯುತ


About The Author


Comments

4 responses to “ಪ್ರೊ ರಾಜನಂದಾ ಘಾರ್ಗಿ ಕವಿತೆ-ಭಾವ ತರಂಗ”

  1.  Avatar
    Anonymous

    ತುಂಬಾ ಚೆನ್ನಾಗಿದೆ

    1.  Avatar
      Anonymous

      Very nice

  2.  Avatar
    Anonymous

    Suuuuper

  3. Shivanand Aparaj Avatar
    Shivanand Aparaj

    ಭಾವಗಳನ್ನು ಭಟ್ಟಿಗಿಳಿಸಿ ಹಾಳೆಯ ಮೇಲೆ ತಂದಿದ್ದಕ್ಕೆ ಧನ್ಯವಾದಗಳು

Leave a Reply

You cannot copy content of this page