ಪರಿಮಳ ಎನ್ ಎಂ ಐವರ್ನಾಡು ಕವಿತೆ-ಅಸೆ

ಕಾವ್ಯ ಸಂಗಾತಿ

ಪರಿಮಳ ಎನ್ ಎಂ ಐವರ್ನಾಡು

ಅಸೆ

ಆಸೆಗಳ ಆಮಿಷಕೆ
ಬಲಿಯಾಗದಿರು ಮನುಜ
ಬಲಿಯಾದರೆ ನಿನ್ನವಶೇಷವೂ
ಸಿಗಲಾರದು ಮನುಜ

ಆಸೆಗಳ ಸೆರೆಮನೆಯಲಿ
ಖೈದಿಯಾಗದಿರು ಮನುಜ
ಖೈದಿಯಾದರೆ ನಿನ್ನವರಾರು
ನಿನಗಿಲ್ಲ ಮನುಜ

ಆಸೆಗಳ ಮೋಹಪಾಶಕೆ
ಬೀಳದಿರು ಮನುಜ
ಬಿದ್ದರೆ ಏಳಲಾಗದು
ಕೇಳು ನೀ ಮನುಜ

ಆಸೆಗಳ ಅನಂತತೆಯ
ಹುಡುಕದಿರು ಮನುಜ
ಹುಡುಕಿದರೆ ಕಳೆದುಕೊಳ್ಳುವೆ
ನಿನ್ನ ನೀನು ಮನುಜ

ಆಸೆಗಳಿಗೆ ಮಿತಿಯಿರಲಿ
ಅತ್ಯಾಸೆ ನಿಗ್ರಹಿಸು ಮನುಜ
ಅತ್ಯಾಸೆಯಿಂದ ಬೀಳುವೆ
ಪಾಪಗಳ ಕೂಪಕೆ ಮನುಜ

ಆಸಗಳ ಬಲೆಯಿಂದ
ಹೊರಗೆ ಬಾರೋ ಮನುಜ
ಹೊರಬಂದರೆ ಸುಖಜೀವನ
ನಿನಗುಂಟು ಮನುಜ


About The Author


Comments

3 responses to “ಪರಿಮಳ ಎನ್ ಎಂ ಐವರ್ನಾಡು ಕವಿತೆ-ಅಸೆ”

  1.  Avatar
    Anonymous

    ತುಂಬು ಹೃದಯದ ಧನ್ಯವಾದಗಳು

    1. Thyagam harekala Avatar
      Thyagam harekala

      ಹಾ ಹಾ ಅದ್ಭುತವಾಗಿದೆ.. ಸಾಮಾನ್ಯ ವ್ಯಕ್ತಿಗೂ ಅರ್ಥ ವಾಗುವ ರೀತಿಯಲ್ಲಿ ಬರೆದಿದ್ದಾರೆ.. ಸಹೋದರಿಗೆ ಅಭಿನಂದನೆಗಳು

      1.  Avatar
        Anonymous

        ಚೆನ್ನಾಗಿದೆ

Leave a Reply

You cannot copy content of this page