ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ.ರೇಣುಕಾತಾಯಿ.ಸಂತಬಾ

ಗಜಲ್

ದಾಂಪತ್ಯ ರಾಗದ ಹಾಡಿರಲಿ ಯುಗಳ ಜೀವನದಲಿ
ಹೂವಿನ ಹಾಸಿಗೆಯಂತಿರಲಿ ಜಗಳ ಜೀವನದಲಿ//

ಸುಖ-ದುಃಖಗಳು ಸಮ-ಬೆಸದಲಿ ಬೆರೆತು ಹೋಗಲಿ
ಮುನಿಸಿನಲಿಯೂ ಬಾರದಿರಲಿ ಬೈಗುಳ ಜೀವನದಲಿ //

ಅನುದಿನದ ಭೋಜನವಿರಲಿ ಬಾಳಿನ ಕೂಟದಲಿ
ಒಲವಿನ ಒಲೆಗೆ ಬೀಳದಿರಲಿ ಚಗಳ ಜೀವನದಲಿ//

ಬದುಕು ಭಾರವಾಗದೆ ಹೂವಂತೆ ಹಗುರವಾಗಲಿ
ಭಾವಬಂಧನ ಹೊಳೆಯುತಿರಲಿ ಹವಳ ಜೀವನದಲಿ//

ಮಮತೆಯ ಮಡಿಲಿದ್ದರೆ ಅದುವೆ ಸ್ವರ್ಗ
ತಾಯಿ ಹಾಡುತಿರಲಿ ಜೋಗುಳ ಜೀವನದಲಿ//


About The Author

Leave a Reply

You cannot copy content of this page

Scroll to Top