ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೆಚ್. ಎಸ್. ಪ್ರತಿಮಾ ಹಾಸನ್.

ಪ್ರಜ್ಞಾವಂತ ಮತದಾರರು

ಪ್ರಜ್ಞಾವಂತ ಪ್ರಜೆಗಳೆ ಬನ್ನಿರಿ ಎಲ್ಲರು
ತಾಳ್ಮೆಯಿಂದ ಯೋಚಿಸಿ ಆಯ್ಕೆ ಮಾಡಿರೆಲ್ಲರು
ಮತದಾನ ನಮ್ಮ ಹಕ್ಕು ಎಂದು ಚಲಾಯಿಸಿರಿ
ಭೂಟಾಟಿಕೆಯ ಮಾತುಗಳಿಗೆ ಮಾರು ಹೋಗದಿರಿ

ಎಲ್ಲೆಡೆಯು ಸುಳ್ಳು ಭರವಸೆಗಳು ಹಾರಾಡುತಿರಲು
ನಂಬದಿರಿ ಎಂದಿಗೂ ಆ ಮಾತುಗಳನು
ಹಂಚುವರು ಹಿಡಿಹಿಡಿಯಾಗಿ ವಸ್ತುಗಳನು
ವಡ್ಡುವರು ಹಲವಾರು ಆಮೀಷಗಳನು

ಹೆಂಡ, ಸೀರೆ, ಹಣದ ಆಸೆಯನ್ನು ತೋರುವರು
ಕೆಲಸ ಮಾಡಿರೆಂದರೆ ಕೇಳದವರು ಇವರು
ಹಿಂಡು ಹಿಂಡಾಗಿ ಬರುವರು ಎಲ್ಲರು ಸ್ವಾರ್ಥದವರು
ಮಾತುಗಳನ್ನು ಕೇಳುತ್ತಿದ್ದರೆ ನಿಜವಾದ ನಾಯಕರಿವರು

ನಂಬದಿರಿ ಎಂದಿಗೂ ಅವರನ್ನು ನೀವೂ ಎನ್ನುತಲೆ
ಈಗಲೇ ಆಗೋಗಿದೆ ಬಹಳಷ್ಟೂ ನುಕ್ಸಾನು ಇವರಿಂದಲೆ
ಬಗೆ ಬಗೆಯ ರೀತಿಯಲ್ಲಿ ಬೇಡವರು ತಿಳಿಯುತಲಿ
ಬೇಕೆಂದರೆ ಕೈ ಕಾಲುಗಳನ್ನು ಹಿಡಿಯುವವರು ಎನ್ನುತಲಿ

ಉತ್ತಮ ನಾಯಕ ಯಾರೆಂದು ನೀವೇ ನಿರ್ಧರಿಸಬೇಕಿದೆ
ದೇಶದ ಉಜ್ವಲ ಭವಿಷ್ಯವನ್ನು ನೀವೇ ಸೃಷ್ಟಿಸಬೇಕಿದೆ
ಬಹಳಷ್ಟು ಎಚ್ಚರಿಕೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ
ನಮ್ಮ ಮುಂದಿನ ಭವಿಷ್ಯ ನಮ್ಮ ಕೈಯಲ್ಲಿಯೆ ಇದೆ.


ಹೆಚ್. ಎಸ್. ಪ್ರತಿಮಾ ಹಾಸನ್.

About The Author

Leave a Reply

You cannot copy content of this page

Scroll to Top