ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಯೋಗೇಂದ್ರಾಚಾರ್ ಎ ಎನ್

ಕಮಲದಲ್ಲರಳಿದ ಕಲಿಯುಗದ ಮಧುಕೈಟಭರು ಯಾರಿವರು
ಉರಿಯುತ್ತ ನಂಜು ಸುರಿಸುವ ಕೆಂಗಣ್ಣ ರಾಜರು ಯಾರಿವರು

ಇತಿಹಾಸದ ಪುಟಗಳನ್ನೆಷ್ಟು ಕೆದಕಿದರು ಸಿಗದವರ ಕುರುಹು
ಶಾಸನಗಳಿಲ್ಲದ ಅನಾಮಿಕ ರಾಜ ಸಹೋದರರು ಯಾರಿವರು

ಕೊಂದೆವೆಂದು ಹೇಳಿಕೊಳ್ಳುವುದೂ ಉಪಾಧಿಯಾಗಿಬಿಟ್ಟಿದೆ
ರಾಜಕೀಯ ದಾಳವಾಗಿ ಉದ್ಭವಿಸಿದ ಮನ್ಮಥರು ಯಾರಿವರು

ಕುಲಗೋತ್ರಗಳಿಲ್ಲದವರಿಗೆ ಸಾವಿರಾರು ತಂದೆ ತಾಯಿಯರಂತೆ
ಅನಾಥರಾಗಿ ಹುಟ್ಟಿದ ಉಗ್ರ ವೀರಾಧಿವೀರರು ಯಾರಿವರು

ಮೌನಯೋಗಿಯ ಮನದಲಿ ಕಿಚ್ಚೆಬ್ಬಿಸಿದವರು ಯಾರಿವರು
ಜಾತಿಗೊಂದು ಷಾಯಿಯ ಬಳಿಯಬಂದವರು ಯಾರಿವರು


About The Author

1 thought on “ಯೋಗೇಂದ್ರಾಚಾರ್ ಎ ಎನ್ ಗಜಲ್”

  1. ಸುಂದರ ಕವನ ಅರ್ಥಗರ್ಭಿತ ವಾಗಿದೆ ಇತ್ತೀಚೇಗೆ ಹುಟ್ಟಿದ “ಉರಿ.ನಂಜು” ನೀವು ಜಾತಿಗೊಂದು ಮಸಿ …ಕಲ್ಪನೆ ಸುಂದರ ವಾಗಿದೆ ಪ್ರಕಟಿಸಿ ಓದಲು ಅನವು ಮಾಡಿಕೊಟ್ಟ ಸಂಗಾತಿ ಸಂಪಾದಕರಿಗೆ ಧನ್ಯವಾದಗಳು

Leave a Reply

You cannot copy content of this page

Scroll to Top