ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಆ ಗಳಿಗೆ…

ಆ ಗಳಿಗೆ..
ಮರೆಯಲಾಗದ ಗಳಿಗೆ
ಅವಳಿಗೆ..
ಮರುಕಳಿಸಿ
ಉಮ್ಮಳಿಸಿ
ಬಿಕ್ಕುತ್ತಿದೆ..
ಆರದ ಗಾಯದ
ಹಳೆಯ ನೋವು..
ಭಾವನೆಗಳ ಮೀಟಿ
ಇರಿದು ಬೆನ್ನಲಿ ಈಟಿ
ಹೆಣ್ತನವ ಚಿವುಟಿ
ಹೊಸಕಿ ಮೆರೆದ
ಪೌರುಷದ ಬೇಟ
ರಕ್ಕಸನ ನೋಟದಲಿ
ಪುಟಿದೆದ್ದು ಉಕ್ಕಿದ ಆ ಗಳಿಗೆ
ಮರೆಯಲಾಗದ ಗಳಿಗೆ…
ನೆನಪುಗಳು ಕರಗಿ
ಉದುರುತಿವೆ
ಕಣ್ಣ ಹನಿಗಳಾಗಿ…!

—————————————

About The Author

Leave a Reply

You cannot copy content of this page

Scroll to Top