ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಡೋ.ನಾ.ವೆಂಕಟೇಶ

ನಾನು ಮತ್ತು ಸಂಪ್ರದಾಯ

ಬೆಳಗಾಗ
ದೇವರ ಕೋಣೆಯ ಪೀಠದ ಮೇಲೆ ಆಸೀನ
ಅಜ್ಜಿ
ಕೊಲ್ಲಾಪುರದ ಸೀರೆ
ಹಣೆ ತುಂಬಾ ಕುಂಕುಮದ
ನೀರೆ ನನ್ನಜ್ಜಿ
ಮೂಗಲ್ಲಿ ನತ್ತು ,ಅದೇನು ಗತ್ತು
ಕಿವಿಯಲ್ಲಿ ವಜ್ರದೋಲೆ
ಬಾಯಲ್ಲಿ ವೀಳ್ಯದೆಲೆ!!

ಅಬ್ಬಬ್ಬ
ದೇವಿಯೋ ಅಜ್ಜಿಯೋ
ದಿಗಿಲು ದಿಗ್ಬಂದನ

ಅಂದೇ ಅಮ್ಮನ
ಫೋಟೋದಲ್ಲೂ ಅದೇ
ನಮ್ಮಜ್ಜಿ ದಿರಿಸು!
ನನಗೆ ನನ್ನ
ಮೈಮೇಲಿದ್ದ ತಲೆ ನನ್ನದೋ
ಅಜ್ಜಿಯದೋ ತಿಳಿಯದ
ಸಂಭ್ರಾಂತಿ
ಸಂಭ್ರಮ

ಅಲ್ಲೇ ಆಡುತ್ತಿದ್ದ ಮೊಮ್ಮಗಳು
ತನ್ವಿ
ತೊಡೆ ಮೇಲೇರಿ ನನ್ನ
ಅಜ್ಜ ನೀನೇಕೆ ಹೀಗೆ
ಹಣೆ ಮೇಲೆ ನಾಮ
ಖಾಲಿ ತಲೆ ಮೇಲೇಕೆ ಈ
ಭಾರೀ ಪೇಟ
ಮತ್ತೇಕೆ ಅಜ್ಜ ಈಗೀಗ
ಕಚ್ಚೆ ಪಂಚೆ, ಜರತಾರಿ ಅಂಚು
ಕೊಲ್ಲಾಪುರ ಚಪ್ಪಲಿ ಮಿಂಚು

ಮೊಮ್ಮಗಳ ಮಾತು
ಮಿಂಚು ಹೊಡೆಯುವ
ಸಂಚು

ನಾನೀಗ ನಾನೋ
ಅಥವ ಅಜ್ಜ, ನೀನೋ
ಇಲ್ಲದ ತಲೆ ಕೆಡಿಸಿಕೊಂಡೆ

ದೇವರ ಕೋಣೆಯ
ಪೀಠದ ಮೇಲೆ
ನನ್ನವಳ ಕಂಡೆ!!


About The Author

18 thoughts on “ನಾನು ಮತ್ತು ಸಂಪ್ರದಾಯ-ಡಾ ಡೋ.ನಾ.ವೆಂಕಟೇಶ”

    1. D N Venkatesha Rao

      ಅಜ್ಜ ಅಜ್ಜಿ ನಾನು ತನ್ವಿ ಎಲ್ಲಾ ಪ್ರತಿಮೆಗಳು
      ಅಜ್ಜ ಅಜ್ಜಿ ಪ್ರಭಾವ ನನ್ನ ಮೇಲೆ ಬಹಳಷ್ಟು !

  1. ಸುಂದರವಾದ ಹಾಡಿನ ಶೀರ್ಷಿಕೆ

    ಸಂಪ್ರದಾಯ, ಪರಂಪರೆ ,ಇವೆಲ್ಲವನ್ನು
    ಅತಿ ಸುಂದರವಾಗಿ ಈ ಕವಿತೆಯಲ್ಲಿ
    ತಳಿಯಪಡಿಸಿದ್ದೀರಿ.ಅಜ್ಜ ಅಜ್ಜಿಯರ
    ಜತೆಯಲ್ಲಿ ಮೊಮ್ಮಕ್ಕಳು ಇವೇಲ್ಲವನ್ನು ತಿಳಿದು
    ತಮ್ಮ ಜೀವನದಲ್ಲಿ ಅನುಕರಿಸಲೆಂದು
    ನಾನು ಹಾರೈಸುತ್ತೇೆನೆ.❤️

    1. D N Venkatesha Rao

      Thanks Manjanna
      ಸಂಪ್ರದಾಯ ಗಳನ್ನು ನೆನಪಿಸಿ ಕೊಳ್ಳುವ ಒಂದು ಪ್ರಯತ್ನ

  2. ಬೆಳಗಾಗೆದ್ದು ಅಜ್ಜ ಅಜ್ಜಿಯರನ್ನು ದೇವರ ಪೀಠದಲ್ಲಿ ಕಂಡು ಸಂಜೆಯಾಗುವಾಗ ನಮ್ಮನ್ನೇ ಅಲ್ಲಿ ಕೂರಿಸಿ ಕೊಳ್ಳುವಂತದ್ದು ಜೀವನ ಯಾತ್ರೆಯ ದೊಡ್ಡ ಘಟ್ಟದ ಸಮ್ ಕ್ಷಿಪ್ತ ವಿವರಣೆ. ಅದರಲ್ಲೂ ಕೊಲ್ಲಾಪುರಿ ಸೀರೆ. ವಾಹ್. ಇನ್ನೊಂದು ವಾರದಲ್ಲಿ ಮತ್ತೆ ಕೊಲ್ಹಾಪುರ ಕ್ಕೇ ಹೊಗುವ ನನಗೆ ಅದೂ ಆಪ್ಯಾಯಮಾನ ಎನಿಸಿತು. ಅಜ್ಜ ಅಜ್ಜಿ ತನ್ವಿ ಎಲ್ಲಾ ಈ ಲೋಕದಲ್ಲಿ ನಿಮಿತ್ತ ಮಾತ್ರ.
    ಬಹಳ ಚೆನ್ನಾಗಿದೆ.

    1. D N Venkatesha Rao

      Thank you Surya
      ನಿಜಕ್ಕೂ ನಾವೆಲ್ಲ ಪ್ರತಿಮೆಗಳು
      ಕವನಕ್ಕೆ ಮಾತ್ರ ಅಲ್ಲ @

Leave a Reply

You cannot copy content of this page

Scroll to Top