ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಆತ್ಮ ಜ್ಯೋತಿ

ನಯನ. ಜಿ. ಎಸ್

ಸರ್ವ ಸ್ವಾರ್ಥವನ್ನು ಮರೆತು
ಬದುಕಿನರ್ಥದೊಳಗೆ ಕಲೆತು
ವಿನಯದಲಿ ಜ್ಞಾನ ಅರಿತು
ಸಾಗು ಸಾಗು ಭಾವವೇ,
ಮನ ಬೆಳಗುವ ಆತ್ಮವೇ.

ಸಂಚು – ಚೋದ್ಯ ಅಸುವಿಗೇಕೆ
ಹುಸಿ ತತ್ವ ಸೊಲ್ಲಿಗೇಕೆ
ಚಿಗುರಿಸುತಲಿ ನವ್ಯ ಬಯಕೆ
ಸಾಗು ಸಾಗು ಭಾವವೇ,
ಮನ ಬೆಳಗುವ ಆತ್ಮವೇ.

ಅಂತೆ ಕಂತೆಗಳನು ತೊರೆದು
ಹೃನ್ಮನದಿ ಚೆಲುವು ಮೆರೆದು
ಮಾನವತೆಗೆ ಭಾಷ್ಯ ಬರೆದು
ಸಾಗು ಸಾಗು ಭಾವವೇ,
ಮನ ಬೆಳಗುವ ಆತ್ಮವೇ.

ದರ್ಪ ಮೋಹಗಳನು ಮೆಟ್ಟಿ
ಪ್ರಾಂಜಲತೆಯೊಳು ಕನಸು ಕಟ್ಟಿ
ಆಗುತಲಿ ಗುರಿಗೆ ಜಟ್ಟಿ
ಸಾಗು ಸಾಗು ಭಾವವೇ,
ಮನ ಬೆಳಗುವ ಆತ್ಮವೇ.

ನಗುವಿಗೇಕೆ ಹಿಂಸೆ ಸುಲಿಗೆ
ಕಿಡಿಯದೇಕೆ ಮನದ ಇಳೆಗೆ
ಹಸನುಗೊಳಿಸಿ ನಿತ್ಯ ಬಾಳ್ಗೆ
ಸಾಗು ಸಾಗು ಭಾವವೇ,
ಮನ ಬೆಳಗುವ ಆತ್ಮವೇ.


About The Author

Leave a Reply

You cannot copy content of this page

Scroll to Top