ಕಾವ್ಯ ಸಂಗಾತಿ
ಈಶ್ವರ ಜಿ ಸಂಪಗಾವಿ
ಗಜಲ್

ಕೋಗಿಲೆಯ ಕಂಠದ ಗಾನ ನೀನು
ಆಗಸದ ಬಾನಾಡಿಗೆ ತಾಣ ನೀನು
ಬನದ ಹಸಿರ ಸಿರಿಯ ಚೆಲುವೆ ನೀ
ನಲ್ಲನಲಿ ಎದೆಬಿರಿವ ಬಾಣ ನೀನು
ನಿದಿರೆಯ ಮೂಟೆ ಕಟ್ಟಿ ಕಣ್ತೆರೆಸು
ಮದಿರೆಯ ಬೀರಿದ ಮಾನ ನೀನು
ಮುದದಲಿ ಹೊಂದು ದಿಲ್ ಖುಷ್
ಹದುಳದ ಮನಸಿನ ಜಾಣ ನೀನು
ಸಂತೆಯಲಿ ನಿಂತ ಸಂತನಾಗಿರುವೆ
ಕಂತುಹರ ಈಶ್ವರನ ಧ್ಯಾನ ನೀನು



