ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್ ವಿಶೇಷ

ಸವಿತಾ ಮುದ್ಗಲ್

ಮಿಡಿದ ಜೀವ ಮೂಡಿದ ಭಾವ

ಮಿಡಿದ ಜೀವಕೆ ಮೂಡಿದೆ ಭಾವನೆಯು
ಮೆಲ್ಲನೆ ಸದ್ದಿಲ್ಲದೇ ಪ್ರೀತಿಯು ಮೂಡಿರಲು
ರಂಗೇರಿದೆ ದಿನದಿನವು ಕೆಂಪಾದ ಮೊಗ್ಗಿನಂತೆ
ಸಿದ್ದವಾಗಿದೆ ಅರಳಿದ ಸುಮದ ಸುವಾಸನೆಯಂತೆ||

ಕಡಲಲ್ಲಿ ಇಂದೇಕೋ ಆವರಿಸಿದ ಸುಳಿಗಾಳಿಗೆ
ಸಂಜೆಯಾಗುತ್ತಲೇ ಚಂದಿರನ ಬೆಳದಿಂಗಳಿಗೆ
ಅಲೆಗಳ ಹೊಯ್ದಾಡಲು ಪುಟಿದೇಳಿ ಕರಿದಿವೆ
ಪ್ರೇಮದ ಸಂಜೆಯಲಿ ನಿನ್ನಾಗಮನದ ಸುದ್ದಿಗೆ||

ಬಳಿಯಿರಲು ನೀನಿಂದು ಕೈಹಿಡಿದು ದಡದಲ್ಲಿ
ಅನುಕ್ಷಣವು ಒಲುಮೆಯ ಪಾಠವಿಂದು ಹೃದಯದಲ್ಲಿ
ಮನೆಮಾಡಿದೆ ನಮ್ಮಿಬ್ಬರ ಮನಸ್ಸಿನಾ ಆಳದಲ್ಲಿ
ರುಜುಹಾಕಿ ನಡೆದಂತೆ ಪ್ರೀತಿಯ ಬಾಳಿನಲ್ಲಿ ||


About The Author

Leave a Reply

You cannot copy content of this page

Scroll to Top