ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್ ವಿಶೇಷ

ಮಾಲಾ ಚೆಲುವನಹಳ್ಳಿ

ಪ್ರೇಮದುಯ್ಯಾಲೆ

ಆ ನಿನ್ನ ಪ್ರೇಮದ ಶಿಖರದಲ್ಲೆನ್ನನಿರಿಸಿ
ಪ್ರತಿ ಕ್ಷಣವೂ ಆರಾಧಿಸುತ್ತಿರುವೆ
ಈ ನನ್ನ ಬಾಳಿನೊತ್ತಿಗೆಯ ಅರ್ಥವತ್ತಾಗಿಸಿ
ಮುಖಪುಟಕೊಂದು ಅಂದದ ಚಿತ್ತಾರ ಬಿಡಿಸಿರುವೆ

ಮಳೆನಿಂತಾಗ ಮೂಡಿದ ಕಾಮನಬಿಲ್ಲoತೆ
ಅಂತ್ಯಕ್ಕೆ ಆರಂಭವಾಗಿ ಬಂದವ ನೀನು
ಒಲವೂ,ಬಲವೂ ಅರಿವಿಗೆ ಬಾರದಂತೆ
ಬಾಳಿಗೆ ಭರವಸೆಯ ತಂದವ ನೀನು

ವ್ಯಕ್ತಿಯಾಗಿ ಬರಲಿಲ್ಲ ನೀನೆನ್ನ ಬಾಳಿಗೆ
ಶಕ್ತಿಯಾಗಿ ಬಂದು ಆಗಿರುವೆ ದಾರಿ ದೀವಿಗೆ
ಬಾಳೊಂದು ಪ್ರೇಮದುಯ್ಯಾಲೆಯಾಗಿ
ಹೊರಟಿದೆ ಪ್ರೀತಿಯ ತೇರಿಂದು ಕೊನೆತಿರುವವರೆಗೆ

ನೀ ಹಾಸಿರಲು ಹಾದಿಗೆ ಒಲವಿನ ಹೂಗಳ
ಪಯಣವಿದು ಸಾಗುತಿದೆ ಬಲು ಸಂಭ್ರಮದಿ
ರಂಗು ರಂಗಲಿ ಮುದಗೊಂಡಿರಲು ಮನದoಗಳ
ಗಾನ ಪಾಡುತಿವೆ ಹೃದಯಗಳು ಸಡಗರದಿ

ವಿಕಟ ಕೂಪದಿಂದ ಹೊರತ0ದ ಆಪದ್ಭಾoಧವ
ಕಣ್ಣೀರ ಧಾರೆಯಲೊಮ್ಮೆ ನಿನ್ನ ಮೀಯಿಸುವಾಸೆ
ವಿಧಿಯ ಅಟ್ಟಹಾಸಕೆ ಸೆಡ್ಡು ಹೊಡೆದವ
ಮುಂದೆಲ್ಲಾ ದಿನಗಳ ಹೂ ದೋಟವಾಗಿಸುವಾಸೆ


About The Author

2 thoughts on “ಮಾಲಾ ಚೆಲುವನಹಳ್ಳಿ”

Leave a Reply

You cannot copy content of this page

Scroll to Top