ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಆಸೀಫಾ-

ಗಜಲ್

ಎನ್ನೊಡಲ ಉಚ್ವಾಸ ನಿಶ್ವಾಸಗಳೇ ನಿನ್ನಿರುವಿಕೆಗೆ ಸಾಕ್ಷಿ
ಅಗೋಚರ ಅಗಮ್ಯ ಶಾಂತ ಮೌನವೇ ಅಪ್ಪುಗೆಗೆ ಸಾಕ್ಷಿ

ತನುವಿನೊಳಗೆ ನೆಲೆಯಾದ ನಿಸ್ವಾರ್ಥದ ಸ್ವಾರ್ಥ ನೀನು
ತೊಡರಿಲ್ಲದ ಹೆಜ್ಜೆಗಳ ಅನುಬಂಧ ಸೋಗಿಲ್ಲದ ಕನಸಿಗೆ ಸಾಕ್ಷಿ

ಅಧರಪಾನದ ಮತ್ತಿಗೆ ಅತಿಶಯದಿ ಕಾತರಿಸಿ ಕಾದಿರುವೆನು
ಚಿತ್ತದಲಿ ಬಿತ್ತರಗೊಂಡ ಚಿತ್ತಾರಗಳೇ ಬಯಕೆಗಳಿಗೆ ಸಾಕ್ಷಿ

ಹೂಬನದಲಿ ಹಾಡುವ ದುಂಬಿಗಳ ಮಾಧುರ್ಯವೇ ಮಧುರ
ಬಿರಿದ ಪಕಳೆಗಳೇ ಬಡಿತದಲ್ಲಿ ತಳವೂರಿದ ಒಲವಿಗೆ ಸಾಕ್ಷಿ

ಭಾವಗಳು ಜೇನಹನಿಸಿ ಜೋಕಾಲಿಯಾಡುತಿವೆಯಲ್ಲ ಆಸೀ
ನಗುವ ಕಾರಂಜಿ ಚಿಮ್ಮಿಅರಳಿದ ಮೊಗವೇ ನನ್ನ ಪ್ರೀತಿಗೆ ಸಾಕ್ಷಿ


About The Author

1 thought on “ಆಸೀಫಾ-ಗಜಲ್”

Leave a Reply

You cannot copy content of this page

Scroll to Top