ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಹ(ವನ)ವಾಸ

ಮಾಜಾನ್ ಮಸ್ಕಿ

ನಡೆಯುವ ಹಾದಿಗೆ
ನಿನ್ನ ಸಣ್ಣ ತಪ್ಪುಗಳ
ಮುಳ್ಳುಗಳನ್ನೇ ಹಾಸಿದೆ

ರಕ್ತ ಸಿಕ್ತ ಕೀವು
ತುಂಬಿದ ಕಾಲಿಗೆ
ಸರಪಳಿ ಸುತ್ತಿದೆ

.

ತಂತ್ರ ಕುತಂತ್ರಕ್ಕೆ
ಒಲವಿನ ಸೋಗು

ಅಯ್ಯೋ…. ನಿನ್ನ
ಮರ್ಕಟ ಬುದ್ದಿಗೆ
ಕ್ಷಮೆ ಬೇಕೇ?!

ಅದೆಂತಹದೋ ನಿನ್ನ
ನಂಜಿನ ದ್ವೇಷ
ಮದ್ದಿಲ್ಲದೇ ನರಳುತ್ತಿರುವೆ

ಮತ್ತೇಕೆ ಬಯಸುವೆ
ನಿನ್ನ ಸಹ(ವನ)ವಾಸ


About The Author

Leave a Reply

You cannot copy content of this page

Scroll to Top